ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಸಿಎಂ ಅವಧಿಯಲ್ಲಿ ದಾಖಲೆ ನಿರ್ಮಾಣವಾಗುತ್ತಿದ್ದಂತೆ ಸಿಎಂ ಸ್ಥಾನದ ಚರ್ಚೆ ಮತ್ತೇ ಆರಂಭವಾಗಿದೆ. ಈ ಸಂಬಂಧ ಸಿಎಂ ಹೈಕಮಾಂಡ್ ಭೇಟಿಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಭೇಟಿಗೆ ಜ.13 ರಂದು ಮುಹೂರ್ತ ನಿಗದಿಯಾಗಲಿದೆ ಎಂಬ ಮಾತುಗಳು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿಬಂದಿವೆ. ಕೆ.ಸಿ. ವೇಣುಗೋಪಾಲ್ ಅವರ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಹೇಳಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದಾಗ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ, ರಾಹುಲ್ ಗಾಂಧಿ ಭೇಟಿಗೆ ಅನುಮತಿ ನೀಡುತ್ತಿದ್ದಂತೆ ದೆಹಲಿಗೆ ತೆರಳಲಿದ್ದು, ಅನಂತರ ಸಿಎಂ ಸ್ಥಾನ ಮತ್ತು ಕ್ಯಾಬಿನೆಟ್ ಕುರಿತು ಚರ್ಚೆ ನಡೆಯಲಿದೆ. ಇದೀಗ ಮತ್ತೊಂದು ಕುತೂಹಲದ ಘಟಕ್ಕೆ ರಾಜ್ಯ ರಾಜಕಾರಣ ಬಂದು ನಿಂತಿದೆ.

