ಬೆಂಗಳೂರು : ಬಳ್ಳಾರಿ ರೆಡ್ಡಿಗಳ ದಂಗಲ್‌ಗೆ ಮತ್ತೊಬ್ಬ ಅಧಿಕಾರಿಯ ತಲೆ ದಂಡವಾಗಿದ್ದು,
ಡಿಐಜಿಪಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ.
ಗಲಭೆಯಲ್ಲಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತರ ಪ್ರಾಣ ಹೋಗಿತ್ತು. ಇದಕ್ಕೆ ಸಂಬAಧಿಸಿದAತೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಈ ನಡುವೆ ಬಳ್ಳಾರಿ ಎಸ್‌ಪಿ ಯನ್ನು ಸರಕಾರ ಒಂದೇ ದಿನಕ್ಕೆ ಎತ್ತಂಗಡಿ ಮಾಡಿತ್ತು.
ಇದೀಗ ಡಿಐಜಿಪಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಅವg ಸ್ಥಾನಕ್ಕೆ ಡಾ.ಪಿ.ಎಸ್. ಹರ್ಷಾ ಅವರನ್ನು ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ. ವರ್ತಿಕಾ ಅವರನ್ನು ಸಿವಿಲ್ ರೈಟ್ಸ್ ಮತ್ತು ಎನ್ಫೋರ್ಸ್ಮೆಂಟ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

