ಸುದ್ದಿ

ಬೆಳಗಾವಿಯ ಖ್ಯಾತ ನ್ಯಾಯವಾದಿ: ಬಾಳ್ಕುದ್ರು ದಿನಕರ ಶೆಟ್ಟರ ಅಭಿನಂದನ ಗ್ರಂಥ ಬಿಡುಗಡೆ

Share It

ಉಡುಪಿ : ಬೆಳಗಾವಿಯ ಹಿರಿಯ ನ್ಯಾಯವಾದಿ, ಬಂಟರ ಸಂಘದ ಮಾಜಿ ಉಪಾಧ್ಯಕ್ಷ ಬಾಳ್ಕುದ್ರು ದಿನಕರ ಶೆಟ್ಟಿಯವರ 75 ನೇ ಅಮೃತ ಮಹೋತ್ಸವ ಹಾಗೂ ಅಭಿನಂದನ ಗ್ರಂಥ ಬಿಡುಗಡೆ ಕಾರ್ಯಕ್ರಮ ಹೊಟೇಲ್ ಹೆರಿಟೇಜ್ ಕಿಚನ್ ಸಭಾಂಗಣದಲ್ಲಿ ನಡೆಯಿತು.

ಗೋವಾ ಸರಕಾರದ ಸಮಾಜ ಕಲ್ಯಾಣ ಸಚಿವ ಸುಭಾಷ್ ಫಲ್ ದೇಸಾಯಿ ಶುಭ ಹಾರೈಸಿದರು. ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದರು.

ವಿಶ್ವೇಶ್ವರಯ್ಯ ಟೆಕ್ನಾಲಜಿ ವಿ.ವಿ. ಉಪಕುಲಪತಿ ಡಾ। ಪ್ರಸಾದ ರಾಮಪುರೆ ಮಾತನಾಡಿ, ದಿನಕರ ಶೆಟ್ಟರು ತಮ್ಮ ಕಾರ್ಯ ವೈಖರಿಯಿಂದ ಎಲ್ಲರ ಮನಸ್ಸನ್ನು ಗೆದ್ದವರು. ಅವರ ಸಮಾಜಮುಖಿ ಕಾರ್ಯ, ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.

ಬೆಳಗಾವಿ ಬಂಟರ ಸಂಘದ ವಿಜಯ ಎಂ. ಶೆಟ್ಟಿ ಘಟಪ್ರಭಾದ ಗುತ್ತಿಗೆದಾರ ಜಯಶೀಲ ಎನ್. ಶೆಟ್ಟಿ ಬೆಂಗಳೂರು ಹೊಟೇಲ್ ಉದ್ಯಮಿ ಕೊರ್ಗಿ ಭೋಜರಾಜ ಶೆಟ್ಟಿ, ಬೆಳಗಾವಿ ಪ್ರ.ದ. ಗುತ್ತಿಗೆದಾರ ಪ್ರಸನ್ನ ಕುಮಾರ್‌ಶೆಟ್ಟಿ, ಯರಗಟ್ಟಿ ಹೊಟೇಲ್ ಉದ್ಯಮಿ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.

ಕಿರಿಯ ನ್ಯಾಯವಾದಿಗಳು, ಅಭಿಮಾನಿಗಳು ದಿನಕರ ಶೆಟ್ಟಿಯವರನ್ನು ಗೌರವಿಸಿದರು. ಸುಜಾತಾ ಶೆಟ್ಟಿ, ಗಣ್ಯರು, ಹಿತೈಷಿಗಳು ಭಾಗವಹಿಸಿದ್ದರು. ವಿ। ರೇಖಾ ಹೆಗಡೆ ತಂಡದವರಿಂದ ಭರತನಾಟ್ಯ ಪ್ರದರ್ಶಿಸಲ್ಪಟ್ಟಿತು. ಹಿರಿಯ ನ್ಯಾಯವಾದಿ ಕೆ.ಎಲ್. ಕುಂದರಗಿ ಸ್ವಾಗತಿಸಿದರು. ಕಿತ್ತೂರು ತಾ.ಕಸಾಪ ಅಧ್ಯಕ್ಷ ಬಸವರಾಜ ಕುಪ್ಪಸಗೌಡ ನಿರೂಪಿಸಿದರು. ಪ್ರಕಾಶ ಐಹೊಳೆ ವಂದಿಸಿದರು.


Share It

You cannot copy content of this page