ಹತ್ತು ಹೆಣ್ಣಿನ ನಂತರ ಒಂದು ಮುತ್ತೆತ್ತ ಮಡದಿ : ಮಕ್ಕಳ ಹೆಸರನ್ನೇ ಒಮ್ಮೆಮ್ಮೆ ಮರೆಯುವ ಅಪ್ಪ !

Share It

ನವದೆಹಲಿ: ಮಡದಿ ಹತ್ತು ಹೆಣ್ಣುಮಕ್ಕಳ ನಂತರ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಹತ್ತರಲ್ಲಿ ಕೆಲವರ ಹೆಸರನ್ನೇ ಮರೆಯುತ್ತೇನೆ ಎನ್ನುವ ಗಂಡ. ಇಂತಹದ್ದೊಂದು ಅಪರೂಪದ ಘಟನೆ ಹರಿಯಾಣದಲ್ಲಿ ನಡೆದಿದೆ.

ಜಿಂದ್ ಜಿಲ್ಲೆಯ ಜಿಲಾನಾ ಬ್ಲಾಕ್ ನ ಪೌಲಿ ಗ್ರಾಮದಲ್ಲಿ ಒಂದು ಭರ್ಜರಿ ಸಮಾರಂಭ ಏರ್ಪಡಿಸಲಾಗಿತ್ತು. ಮಡದಿಗೆ ಹನ್ನೊಂದನೇ ಮಗು ಹುಟ್ಟಿದ ಖುಷಿಗೆ, ಅದರಲ್ಲೂ ಗಂಡು ಮಗು ಹುಟ್ಟಿ್ ಖುಷಿಗೆ ಕಾರ್ಯಕ್ರಮ ಆಯೋಜನೆ ಮಾಡಿ, ಊರಿಗೆಲ್ಲ ಊಡ ಹಾಕಿಸಿದ್ದ ಸಂಜಯ್ ಎಂಬಾತ. ಆತನಿಗೆ ಇದು ಸೇರಿ ಹನ್ನೊಂದನೇ ಮಗು.

ಈ ನಡುವೆ ಹೆಣ್ಣುಮಕ್ಕಳು ಕೀಳಲ್ಲ ಎಂಬ ಕಾರಣಕ್ಕೆ ಆತ ಹತ್ತು ಹೆಣ್ಣುಮಕ್ಕಳಾದರೂ ಬೇಸರ ಮಾಡಿಕೊಳ್ಳಲಿಲ್ಲವಂತೆ. ಅವರ ಕುಟುಂಬದಲ್ಲಿ 39 ವರ್ಷದ ನಂತರ ಹೆಣ್ಣು ಮಕ್ಕಳು ಜನಿಸಿದ ಕಾರಣಕ್ಕೆ ಹೆಣ್ಣುಮಕ್ಕಳನ್ನೇ ಗಂಡು ಮಕ್ಕಳಂತೆ ಸಾಕಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಆದರೆ, ಆಗಾಗ ಮಕ್ಕಳ ಹೆಸರು ಮರೆಯುವುದಾಗಿಯೂ ಆತ ಹೇಳಿಕೊಂಡಿದ್ದಾನೆ.

ಆತನ ಮೊದಲ ಮಗಳು ಹನ್ನೆರಡನೇ ತರಗತಿ ಓದುತ್ತಿದ್ದಾಳೆ. ಮಗು ಜಿಂದ್ ಆಸ್ಪತ್ರೆಯಲ್ಲಿ ಹುಟ್ಟಿದ್ದು, ತಾಯಿಯ ರಕ್ತದ ಕೊರತೆ ಇತ್ತು. ಆಕೆಯ ಹಿಮೋಗ್ಲೋಬಿನ್ ಪ್ರಮಾಣ 5 ಗ್ರಾಂ ಮಾತ್ರವಿದ್ದು, ಮಗು ಕೂಡ ‘ಲೋ ಅಮ್ನಿಯಾಟಿಕ್ ಪ್ಲ್ಯೂಯೆಡ್ ಹೊಂದಿತ್ತು. ಆದರೂ, ನಾರ್ಮಲ್ ಹೆರಿಗೆ ಮಾಡಿಸಿದ್ದು, ಮಗು ಮತ್ತು ತಾಯಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹೆಣ್ಣುಮಕ್ಕಳು ಬೇಡ ಎಂದು ಹೇಳುವ ರಾಜ್ಯದಲ್ಲಿ ಹನ್ನೊಂದು ಹೆಣ್ಣುಮಕ್ಕಳನ್ನು ಸಾಕುತ್ತಿರುವುದು ಖುಷಿಯ ವಿಷಯವೇ ಆದರೂ, ಅಷ್ಟೊಂದು ಮಕ್ಕಳನ್ನು ಹೆರುವುದು ತಾಯಿಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದನ್ನು ಅವರಿಗೆ ಮನವರಿಕೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವರದಿಯ ಪ್ರಕಾರ ಹರಿಯಾಣ ರಾಜ್ಯದಲ್ಲಿ ಮಹಿಳಾ ಅನುಪಾತ ಅತ್ಯಂತ ಕಡಿಮೆಯಿದೆ. 1000 ಗಂಡುಮಕ್ಕಳಿಗೆ 834 ಹೆಣ್ಣುಮಕ್ಕಳಿದ್ದಾರೆ.


Share It

You May Have Missed

You cannot copy content of this page