ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರವೆಂದು ಹೇಳಲಾಗುತ್ತಿರುವ ‘ಜನ ನಾಯಗನ್’ ಮೊದಲಿಗೆ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ನಟಿಸಿದ ಕಲಾವಿದರು ಹಾಗೂ ತಾಂತ್ರಿಕ ತಂಡಕ್ಕೆ ನೀಡಲಾಗಿರುವ ಸಂಭಾವನೆ ಕುರಿತಾಗಿ ಈಗ ಹಲವು ವರದಿಗಳು ಹೊರಬಿದ್ದಿವೆ. ಅವುಗಳ ವಿವರ ಇಲ್ಲಿದೆ.
ದಳಪತಿ ವಿಜಯ್:
ಚಿತ್ರ ಆರಂಭದ ವೇಳೆ ವಿಜಯ್ ಅವರಿಗೆ ₹251 ಕೋಟಿ ನೀಡುವ ಬಗ್ಗೆ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಆದರೆ ಅಂತಿಮವಾಗಿ ₹220 ಕೋಟಿ ಸಂಭಾವನೆ ಪಾವತಿಸಲಾಗಿದೆ ಎಂಬ ಮಾಹಿತಿ ಇದೆ. ಇದರ ಜೊತೆಗೆ, ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ₹1000 ಕೋಟಿ ಗಡಿ ದಾಟಿದರೆ, ಹೆಚ್ಚುವರಿಯಾಗಿ ₹31 ಕೋಟಿ ಬೋನಸ್ ನೀಡುವ ಒಪ್ಪಂದವೂ ಇದ್ದುದಾಗಿ ವರದಿಯಾಗಿದೆ.
ನಿರ್ದೇಶಕ ಎಚ್. ವಿನೋದ್:
ತಮ್ಮ ವಿಭಿನ್ನ ಕಥನ ಶೈಲಿಗೆ ಹೆಸರುವಾಸಿಯಾದ ನಿರ್ದೇಶಕ ಎಚ್. ವಿನೋದ್ ಅವರು ಈ ಸಿನಿಮಾಕ್ಕೆ ₹25 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್:
‘ಜನ ನಾಯಗನ್’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ ಅನಿರುದ್ಧ ರವಿಚಂದರ್ ಅವರಿಗೆ ಸುಮಾರು ₹13 ಕೋಟಿ ನೀಡಲಾಗಿದೆ ಎಂದು ವರದಿಯಾಗಿದೆ.
ಬಾಬಿ ಡಿಯೋಲ್:
ಚಿತ್ರದಲ್ಲಿ ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ಬಾಬಿ ಡಿಯೋಲ್ ಅವರು ಸುಮಾರು ₹45 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಪೂಜಾ ಹೆಗ್ಡೆ:
‘ಬೀಸ್ಟ್’ ಚಿತ್ರದ ಯಶಸ್ಸಿನ ಬಳಿಕ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ನಾಯಕಿ ಪಾತ್ರಕ್ಕಾಗಿ ₹3 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಮಮಿತಾ ಬೈಜು:
ವಿಜಯ್ ಅವರ ದತ್ತು ಪುತ್ರ ವಿಜಿ ಶ್ರೀಕಾಂತ್ ಪಾತ್ರದಲ್ಲಿ ನಟಿಸಿರುವ ಮಮಿತಾ ಬೈಜು ಅವರಿಗೆ ₹60 ಲಕ್ಷ ಸಂಭಾವನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಗೌತಮ್ ವಾಸುದೇವ್ ಮೆನನ್:
ಚಿತ್ರ ನಿರ್ಮಾಪಕ ಹಾಗೂ ನಟರಾಗಿರುವ ಗೌತಮ್ ವಾಸುದೇವ್ ಮೆನನ್ ಅವರು ‘ಜನ ನಾಯಗನ್’ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದಕ್ಕಾಗಿ ಅವರಿಗೆ ಸುಮಾರು ₹30 ಲಕ್ಷ ಪಾವತಿಸಲಾಗಿದೆ ಎನ್ನಲಾಗಿದೆ.
ಪ್ರಿಯಾಮಣಿ:
ಪ್ರಿಯಾಮಣಿ ಅವರು ಈ ಚಿತ್ರಕ್ಕೆ ₹25 ರಿಂದ ₹30 ಲಕ್ಷದೊಳಗಿನ ಸಂಭಾವನೆಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನರೈನ್ ರಾಮ್:
‘ಕೈದಿ’ ಮತ್ತು ‘ವಿಕ್ರಮ್’ ಸಿನಿಮಾಗಳ ಮೂಲಕ ಗಮನ ಸೆಳೆದ ನಟ ನರೈನ್ ರಾಮ್ ಅವರು ‘ಜನ ನಾಯಗನ್’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಆಲ್ ಹ್ಯೂಮನಾಯ್ಡ್’ ಎಂಬ ವಿಭಿನ್ನ ಪಾತ್ರಕ್ಕಾಗಿ ಅವರಿಗೆ ₹15 ಲಕ್ಷದಿಂದ ₹20 ಲಕ್ಷದವರೆಗೆ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ರೀತಿಯಾಗಿ ‘ಜನ ನಾಯಗನ್’ ಸಿನಿಮಾ ತನ್ನ ತಾರಾಗಣ ಹಾಗೂ ಭಾರೀ ಸಂಭಾವನೆಗಳ ಕಾರಣಕ್ಕೂ ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

