ರಾಜಕೀಯ ಸುದ್ದಿ

2028 ರವರೆಗೆ ಸಿದ್ದರಾಮಯ್ಯ ಅವ್ರೇ ಸಿಎಂ: ಜಮೀರ್ ಸಿಡಿಸಿದ ಹೊಸ ಬಾಂಬ್ !

Share It

ಚಿಕ್ಕಬಳ್ಳಾಪುರ: “2028 ರವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ ಎನ್ನುವ ಮೂಲಕ ವಕ್ಫ್ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆ ಮೂಲಕ ಡಿಸಿಎಂ ಡಿಕೆಶಿ ಅವರ ಆಸೆಗೆ ತಣ್ಣೀರೆರಚುವ ಮಾತುಗಳನ್ನಾಡಿದ್ದಾರೆ.

“ಸಿದ್ದರಾಮಯ್ಯ ಅವರ ಸ್ಥಾನ ಬದಲಾವಣೆ ಮಾಡಬೇಕಾದರೆ ನಮ್ಮಿಂದ ಹಾಗೂ ನಿಮ್ಮಿಂದ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಏನು ಸೂಚನೆ ನೀಡುತ್ತದೋ, ಅದನ್ನು ನಾವೆಲ್ಲರೂ ಪಾಲಿಸುತ್ತೇವೆ. ನನ್ನ ಅಭಿಪ್ರಾಯ ನಾನು ತಿಳಿಸಿದ್ದೇನೆ. ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲಾ ರಾಜ್ಯಗಳಲ್ಲೂ ಡಿಮ್ಯಾಂಡ್ ಇದೆ. ಚುನಾವಣೆ ನಡೆಸುವ ತಂತ್ರ ಚೆನ್ನಾಗಿ ಗೊತ್ತಿದೆ. ಆ ಕಾರಣದಿಂದಾಗಿ ಅವರನ್ನು ಅಸ್ಸೋಂ ಚುನಾವಣಾ ವೀಕ್ಷಕರಾಗಿ ಮಾಡಲಾಗಿದೆ” ಎಂದು ತಿಳಿಸಿದರು.

ಸಿಎಂ ಬದಲಾವಣೆ ಮಾಡಬೇಕೋ ಅಥವಾ ಬೇಡವೋ ಎಂಬುದು ಹೈಕಮಾಂಡ್ ತೀರ್ಮಾನ. ಒಬ್ಬ ಶಾಸಕನಾಗಿ ನಾನು ಸಿದ್ದರಾಮಯ್ಯ ಅವರೇ ಸಿಎಂ ಆಗಿರಬೇಕು ಎಂಬ ಅಭಿಪ್ರಾಯ ಹೇಳುತ್ತೇನೆ. ಅದನ್ನು ಒಪ್ಪುವುದು ಬಿಡುವುದು ಹೈಕಮಾಂಡ್‌ಗೆ ಸೇರಿದ್ದು ಎಂದು ತಿಳಿಸಿದರು.


Share It

You cannot copy content of this page