ಮಹಿಳಾ ಅಧಿಕಾರಿಗಳ ಮೇಲೆ ಲೈಂಗಿಕ ದೌರ್ಜನ್ಯ: ಮತ್ತೆರಡು ಎಫ್ ಐಆರ್ ಸಾಧ್ಯತೆ

198
Share It

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಹಗರಣ ಮತ್ತಷ್ಟು ಗಂಭೀರವಾಗುತ್ತಿದ್ದು, ವರ್ಗಾವಣೆ ಬೆದರಿಕೆ ಹಾಕಿ ಮಹಿಳಾ ಅಧಿಕಾರಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದೆ.

ಈಗಾಗಲೇ ಮೂರು ಎಫ್ ಐಆರ್ ದಾಖಲಾಗಿದ್ದು, ಪ್ರಜ್ವಲ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ನಡುವೆಯೇ ಮತ್ತೆರೆಡು ಎಫ್ ಐಆರ್ ದಾಖಲಾಗುವ ಸಾಧ್ಯತೆ ಇದ್ದು, ಮಹಿಳಾ ಅಧಿಕಾರಿಗಳಿಗೆ ವರ್ಗಾವಣೆ ಬೆದರಿಕೆ ಮೂಲಕ ಆಗಾಗ ಅತ್ಯಾಚಾರ ನಡೆಸಿದ ಗಂಭೀರ ಆರೋಪ ಕೇಳಿಬಂದಿದೆ.

ವಿಡಿಯೋಗಳ ಆಧಾರದಲ್ಲಿ ತನಿಖೆ ಶುರು ಮಾಡಿರುವ ಎಸ್ಐಟಿ ತಂಡ, ಅದರಲ್ಲಿನ ಸಂತ್ರಸ್ತ ಮಹಿಳೆಯರ ನ್ನು ಸಂಪರ್ಕಿಸಿ, ಅವರಿಂದ ಹೇಳಿಕೆ ಪಡೆದುಕೊಂಡಿದೆ. ಈ ವೇಳೆ ಇಬ್ಬರು ಮಹಿಳಾ ಅಧಿಕಾರಿಗಳು ತಮ್ಮ ಮೇಲೆ ವರ್ಗಾವಣೆ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ತಿಳೊಸಿದ್ದಾರೆ. ಪ್ರತ್ಯೇಕ ದೂರು ನೀಡಲು ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಎಸ್ಐಟಿ ನೀಡಿದ್ದ ಸಹಾಯವಾಣಿ ಮೂಲಕ ಈಗಾಗಲೇ ಒಂಬತ್ತು ಸಂತ್ರಸ್ತೆಯರು ಎಸ್ಐಟಿ ಸಂಪರ್ಕಕ್ಕೆ ಬಂದಿದ್ದಾರೆ. ಕೆಲವು ಮಹಿಳೆಯರಿಂದ ಹೇಳಿಕೆ ಪಡೆದುಕೊಳ್ಳಲಾಗಿದೆ. ಮತ್ತೇ ಕಲವರನ್ನು ಮೊದಲಿಗೆ ಕೌನ್ಸಿಲಿಂಗ್ ಗೆ ಒಳಪಡಿಸಿ, ನಂತರ ಅವರಿಂದ ಹೇಳಿಕೆ ಪಡೆಯಲು ತೀರ್ಮಾನಿಸಿದೆ.

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರೇವಣ್ಣ ಬಂಧನದ ಅವಧಿ ಇಂದಿಗೆ ಮುಗಿದಿದ್ದು, ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಮಾಡಲಿದ್ದಾರೆ. ಈವರೆಗೆ ಪ್ರಜ್ವಲ್ ಶರಣಾಗದಿರುವುದು ರೇವಣ್ಣಗೆ ಕಂಟಕವಾಗುವ ಸಾಧ್ಯತೆ ಇದೆ.

ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಆರೋಪ ಪ್ರತ್ಯಾರೋಪ ಹೆಚ್ಚಾಗಿದೆ. ಜೆಡಿಎಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಡಿ.ಕೆ.ಶಿವಕುಮಾರ್ ಪೆನ್ ಡ್ರೈವ್ ತಯಾರಿಸಿದ ರುವಾರಿ ಎಂದು ಆಎಓಪಿಸಲಾಗುತ್ತಿದೆ‌ ರಾಜಕೀಯ ಏನೇ ಇರಲಿ, ಪೊಲೀಸರು ತಮ್ಮ ಕೆಲಸ ತಾವು ಮಾಡುತ್ತಿದ್ದು, ದಿನದಿಂದ ದಿನಕ್ಕೆ ಪ್ರಕರಣದಲ್ಲಿ ಪ್ರಜ್ವಲ್ ಮೇಲಿನ ಕಾನೂನಿನ ಕುಣಿಗೆ ಬಿಗಿಯಾಗುತ್ತಾ ಹೋಗುತ್ತಿದೆ.


Share It

You cannot copy content of this page