ಬೆಂಗಳೂರು : ಅಕ್ರಮವಾಗಿ ನೆಲಸಿದ್ದ ಇಬ್ಬರು ಬಾಂಗ್ಲಾ ಪ್ರಜೆಗಳನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಹೆಬ್ಬಗೋಡಿ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದ ಫಿರ್ದೋಸ್, ಜಿಹದುಲ್ ಇಸ್ಲಾಂ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊದಲಿಗೆ ಅವರು, ತಾವು ಕಲ್ಕತ್ತಾ ಮೂಲದವರು, ಪಶ್ಚಿಮ ಬಂಗಾಲ ಮೂದವರು ಎಂದು ಹೇಳಿದರು ಎನ್ನಲಾಗಿದೆ.
ಪೊಲೀಸರು ವಿಚಾರಣೆ ಕೈಗೊಂಡಾಗ ಅವರು ಬಾಂಗ್ಲಾದಿಂದ ಬಂದಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಾಂಗ್ಲಾದಿಂದ ಭಾರತದ ವಿವಿಧ ನಗರಗಳಲ್ಲಿ ಕೆಲ ದಿನಗಳ ಕಾಲ ವಾಸವಿದ್ದು, ಇದೀಗ ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ. ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

