KSRTC ಪ್ರಯಾಣಿಕರಿಗೆ ಮತ್ತೊಂದು ಸಿಹಿಸುದ್ದಿ: ಇನ್ಮುಂದೆ ಬೆಂಗಳೂರು-1, ಕರ್ನಾಟಕ-1 ಕೇಂದ್ರಗಳಲ್ಲಿಯೂ ಬುಕ್ಕಿಂಗ್ ವ್ಯವಸ್ಥೆ !
ಬೆಂಗಳೂರು: KSRTC ತನ್ನ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಇನ್ಮುಂದೆ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಈವರೆಗೆ ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಮಾಡಲು ವೆಬ್‌ಸೈಟ್, ಮೊಬೈಲ್ ಆಪ್, ಪ್ರಾಂಚೈಸಿ ಕೌಂಟರ್‌ಗಳಲ್ಲಿ ಮಾತ್ರವೇ ವ್ಯವಸ್ಥೆಯಿತ್ತು. ಈ ಕಾರಣದಿಂದ ಇದೀಗ ಎಲೆಕ್ಟಾçನಿಕ್ ಡೆಲಿವರಿ ಆಪ್ ಸಿಟಿಜನ್ ಸರ್ವೀಸಸ್ ನಿದೇಶನಾಲಯದ ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ರಾಜ್ಯಾದ್ಯಂತ ಇರುವ ೧೦೨೧ ಕರ್ನಾಟಕ ಒನ್ ಕೇಂದ್ರಗಳಲ್ಲಿ ಹಾಗೂ ಬೆಂಗಳೂರು ನಗರದಲ್ಲಿರುವ ೧೬೧ ಬೆಂಗಳೂರು ಒನ್ ಕೇಂದ್ರಗಳಲ್ಲಿ ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಉಳಿದಂತೆ ಸಂಸ್ಥೆಯ ವೆಬ್‌ಸೈಟ್ ಮತ್ತು ಸಹಾಯವಾಣಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.


