ಮೆಟ್ರೋ ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್: ದಿನದ ಡಿಜಿಟಲ್ ಪಾಸ್ ವ್ಯವಸ್ಥೆ ಜಾರಿ

Share It

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ ನೀಡಿದ್ದು, ದಿನದ ಡಿಜಿಟಲ್ ಪಾಸ್ ನೀಡಲು ತೀರ್ಮಾನಿಸಿದೆ.

ಡಿಜಿಟಲ್ ಟಿಕೆಟ್ ಖರೀದಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಬಿಎಂಆರ್‌ಸಿಎಲ್ ಈ ತೀರ್ಮಾನ ತೆಗೆದುಕೊಂಡಿದ್ದು, ಒಂದು ದಿನದ ಪಾಸ್, 3 ದಿನದ ಪಾಸ್ ಮತ್ತು 5 ದಿನದ ಪಾಸ್ ವಿತರಣೆಗೆ ತೀರ್ಮಾನಿಸಿದೆ.

ಪಾಸ್ ಅನ್ನು ಕ್ಯೂಆರ್ ಕೋಡ್ ಬಳಸಿ ಖರೀದಿ ಮಾಡಬಹುದಾಗಿದ್ದು, ಪಾಸ್ ಪಡೆಯಲು ಯಾವುದೇ ಹೆಚ್ಚುವರಿ ಭದ್ರತಾ ಠೇವಣಿಯನ್ನು ಇಡುವಂತಿಲ್ಲ. ಪಾಸ್ ವಿತರಣೆಯು ಜ.15 ರಿಂದ ಜಾರಿಗೆ ಬರಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

1 ದಿನಕ್ಕ 250 ರುಪಾಯಿ, 3 ದಿನಕ್ಕೆ ಪಾಸ್‌ಗೆ 500 ರು, ಹಾಗೂ 5 ದಿನದ ಪಾಸ್‌ಗೆ 850 ರು. ನಿಗದಿ ಮಾಡಿದ್ದು, ಕ್ಯೂರ್ ಕೋಡ್ ಬಳಸಿಯೇ ಪಾಸ್ ಖರೀದಿ ಮಾಡಬಹುದು ಎಂದು ನಮ್ಮ ಮೆಟ್ರೋ ತಿಳಿಸಿದೆ.


Share It

You May Have Missed

You cannot copy content of this page