ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಪೌರಕಾರ್ಮಿಕರೊಂದಿಗೆ ಸಂಕ್ರಾಂತಿ ಸುಗ್ಗಿ
ಬೆಂಗಳೂರು: ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪೌರಕಾರ್ಮಿಕರ ಜತೆಗೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಲಿದ್ದಾರೆ.
“ಸ್ವಚ್ಛತೆಗೆ ಶ್ರಮಿಸುವ ಕೈಗಳಿಗೆ ಸಂಕ್ರಾಂತಿ ನಮನ” ಎಂಬ ಶೀರ್ಷಿಕೆಯಡಿ ಪೌರಕಾರ್ಮಿಕನ್ನು ಗೌರವಿಸುವ ಸಮಾರಂಭ ಏರ್ಪಡಿಸಲಾಗಿದೆ. ಸಚಿವ ರಾಮಲಿಂಗಾರೆಡ್ಡಿ ಅವರು, ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಿದ್ದಾರೆ.

ಗುರುವಾರ ಬೆಳಿಗ್ಗೆ 11 ಗಂಟೆಗೆ BTM ಲೇಔಟ್ ಕ್ಷೇತ್ರದ ಎಸ್.ಜಿ. ಪಾಳ್ಯ ಪಾರ್ಕ್ ಎದುರು ಕಾರ್ಮಕ್ರಮ ನಡೆಯಲಿದೆ. ಮಾಜಿ ಬಿಬಿಎಂಪಿ ಸದಸ್ಯರು, ಮುಖಂಡರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

