ಅಧಿಕಾರಿಗೆ ಅವಾಚ್ಯ ಶಬ್ದದಲ್ಲಿ ಅವಾಜ್:ರಾಜೀವ್ ಗೌಡ ವಿರುದ್ಧ ದೂರು
ಬೆಂಗಳೂರು: ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿದ ಆರೋಪದಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ.
ಶಿಡ್ಲಘಟ್ಟ ಪಾರಾಯುಕ್ತೆ ಅಮೃತಾಗೌಡ ದೂರು ನೀಡಿದ್ದು, ರಾಜೀವ್ ಗೌಡ ನನಗೆ ಧಮ್ಕಿ ಹಾಕಿದ್ದಾರೆ. ತಾಲೂಕು ಬಿಟ್ಟು ಓಡಿಸುತ್ತೇನೆ ಎಂದು ಹೆದರಿಸಿದ್ದಾರೆ. ಇದರಿಂದ ನನಗೆ ಮಾನಸಿಕ ಆಘಾತವಾಗಿದೆ. ನನ್ನ ಆತ್ಮಸ್ಥೆöÊರ್ಯ ಕುಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಕ್ರಮವಾಗಿ ರಸ್ತೆ ಬದಿಯಲ್ಲಿ ಕಟ್ಟಿದ್ದ ಬ್ಯಾನರ್ ತೆರವು ಮಾಡಿದ ಕಾರಣಕ್ಕೆ ಪೌರಾಯುಕ್ತೆಗೆ ಬಾಯಿಗೆ ಬಂದAತೆ ನಿಂದಿಸಿ ರಾಜೀವ್ ಗೌಡ ಅವಾಜ್ ಹಾಕಿದ್ದರು. ಈ ಸಂಬAಧ ಆಡಿಯೋ ಕೂಡಟ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದಾರೆ.
ನಾನು ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೆ. ಅಲ್ಲಿ ದೊಡ್ಡ ಮಟ್ಟದ ಸಂಬಳ ಬಿಟ್ಟು ಸಿವಿಲ್ ಸೇವೆಗೆ ಬಂದಿದ್ದೇನೆ. ಆದರೆ, ಇಲ್ಲಿ ಬ್ಯಾನರ್ ತೆರವು ಮಾಡಿದ್ದಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ, ನನಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.


