ಬೆಂಗಳೂರು: ನೂರು ವರ್ಷಗಳನ್ನು ಪೂರೈಸಿದ್ದ ಶತಾಯುಷಿ ರಾಜಕಾರಣಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ವಯೋಸಹಜ ಅಮಾರೋಗ್ಯದಿಂದ ನಿಧನರಾಗಿದ್ದಾರೆ.
ಭೀಮಣ್ಣ ಖಂಡ್ರೆ ಅವರು 1925 ರಲ್ಲಿ ಜನಿಸಿದ್ದರು. ಕರ್ನಾಟಕ ಸರಕಾರದ ಸಾರಿಗೆ ಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಅವರು ಇತ್ತೀಚೆಗೆ ನೂರು ವರ್ಷಗಳನ್ನು ಪೂರೈಸಿದ್ದರು. ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿಯಾಗಿ ಭೀಮಣ್ಣ ಖಂಡ್ರೆ ಗುರುತಿಸಿಕೊಂಡಿದ್ದರು.
ಅನೇಕ ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದ ಕಾರಣಕ್ಕೆ ನಾಲ್ಕು ದಿನಗಳ ಹಿಂದೆ ಮನೆಗೆ ಕರೆತಂದು, ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿಸಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದರು.
ಪ್ರಭಾವಿ ಸಚಿವ ಈಶ್ವರ್ ಖಂಡ್ರೆ, ಮೊಮ್ಮಗ ಸಾಗರ್ ಖಂಡ್ರೆ ಸೇರಿದಂತೆ ಅಪಾರ ಬಂಧುಗಳು ಮತ್ತು ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಶ್ಯಾಮನೂರು ಶಿವಶಂಕರಪ್ಪ ನಂತರ ಕಾಂಗ್ರೆಸ್ ಮತ್ತೊಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಿದೆ.

