ಅಪರಾಧ ಸುದ್ದಿ

ಕನ್ನಡಿಗರ ಮೇಲೆ ಈರೋಡ್‌ನಲ್ಲಿ ದೌರ್ಜನ್ಯ: ಇಬ್ಬರು ಆರೋಪಿಗಳನ್ನು ಬಂಧಿಸಿದ ತಮಿಳುನಾಡು ಪೊಲೀಸರು

Share It

ಬೆಂಗಳೂರು: ಶಬರಿಮಲೆಗೆ ಹೊರಟಿದ್ದ ಕನ್ನಡಿಗರನ್ನು ತಡೆದು ಹಲ್ಲೆ ನಡೆಸಿದ್ದ ಆರೋಪದಡಿ ಇಬ್ಬರು ಆಆರೋಪಿಗಳನ್ನು ಈರೋಡ್ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದಿAದ ಶಬರಿಮಲೆಗೆ ತೆರಳುತ್ತಿದ್ದ ವಾಹನವನ್ನು ತಡೆದಿದ್ದ ಆರೋಪಿಗಳನ್ನು ವಾಹನಕ್ಕೆ ಕಟ್ಟಿದ್ದ ಕನ್ನಡ ಬಾವುಟವನ್ನು ಕಿತ್ತೆಸೆದು, ಮಾಲಾಧಾರಿಗಳ ಮೇಲೆ ದೌರ್ಜನ್ಯ ನಡೆಸಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದರು.

ಪ್ರಕರಣದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿದ ಸಿಲಂಬರಸನ್, ಅಬ್ದುಲ್ ಮಲ್ಲಿಕ್ ಎಂಭ ಇಬ್ಬರನ್ನು ಬಂಧಿಸಿರುವ ಈರೋಡ್ ಪೊಲೀಸರು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ಸಂಬAಧ ಕನ್ನಡಪರ ಸಂಘಟನೆಗಳು ಅತ್ತಿಬೆಲೆ ಗಡಿ ಬಳಿ ಪ್ರತಿಭಟನೆ ನಡೆಸಿದ್ದವು.


Share It

You cannot copy content of this page