ಉಪಯುಕ್ತ ಸುದ್ದಿ

ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿದ ತಮಿಳುನಾಡು ಸಾರಿಗೆ ಸಚಿವ ಶಿವಶಂಕರ್

Share It

ಬೆಂಗಳೂರು: ತಮಿಳುನಾಡಿನ ಸಾರಿಗೆ ಸಚಿಚರಾದ ಎಸ್.ಎಸ್. ಶಿವಶಂಕರ್ ಅವರು ಕರ್ನಾಟಕ ಸರಕಾರದ ಸಾರಿಗೆ ಮತ್ತು‌ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಸೋಮವಾರ KSRTC ಕೇಂದ್ರ ಕಛೇರಿಯಲ್ಲಿ ಭೇಟಿಯಾದ ಉಭಯ ಸಚಿಚರು, ಸಾರಿಗೆ ಇಲಾಖೆಗೆ ಸಂಬಂಧಿಸಿದ ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಶಕ್ತಿ ಯೋಜನೆ ಜಾರಿಗೆ ತೆಗೆದುಕೊಂಡಿರುವ ಉಪಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಕರ್ನಾಟಕ ಸಾರಿಗೆ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತಮಿಳುನಾಡು ಸಾರಿಗೆ ಸಚಿವರು, ಸಾರಿಗೆ ಇಲಾಖೆಗೆ ಸಿಗುತ್ತಿರುವ ಅಂತಾರಾಷ್ಟ್ರೀಯ ಗೌರವಗಳು, ಶಕ್ತಿ ಯೋಜನೆಯನ್ನು ಸಮರ್ಥವಾಗಿ ನಿಭಾಯಿಸುತ್ತಿರಿವ ರೀತಿಯನ್ನು ಕೇಳಿ ತಿಳಿದುಕೊಂಡರು. ಕರ್ನಾಟಕದ ಸಾರಿಗೆ ವ್ಯವಸ್ಥೆ ದೇಶದಲ್ಲೇ ಮಾದರಿ ಸಾರಿಗೆ ವ್ಯವಸ್ಥೆ ಎಂದು ಕೊಂಡಾಡಿದರು.


Share It

You cannot copy content of this page