ಚೆನ್ನೈ: ತಮಿಳುನಾಡು ವಿಧಾನಸಭಾ ಅಧಿವೇಶನವನ್ನು ನಾಡಗೀತೆಯೊಂದಿಗೆ ಆರಂಭಿಸಿದ್ದು, ಅನಂತರ ರಾಷ್ಟ್ರಗೀತೆ ಹಾಡಲು ಸ್ಪೀಕರ್ ಅನುಮತಿ ನೀಡಲಿಲ್ಲ, ಇದು ವಿವಾದಕ್ಕೆ ಕಾರಣವಾಗಿದೆ.
ಇಂದು ಆರಂಭವಾದ ತಮಿಳುನಾಡು ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲ ಎನ್ ಆರ್ ರವಿ ಭಾಷಣ ಮಾಡಬೇಕಿತ್ತು. ಸದನವನ್ನು ತಮಿಳುನಾಡು ನಾಡಗೀತೆಯೊಂದಿಗೆ ಆರಂಭ ಮಾಡಲಾಯ್ತು. ಆದರೆ, ಅನಂತರವೂ ರಾಷ್ಟçಗೀತೆ ಹಾಡಲು ಸ್ಪೀಕರ್ ಅವಕಾಶ ನೀಡಲಿಲ್ಲ.
ಇದರಿಂದ ಕೋಪಗೊಂಡ ರಾಜ್ಯಪಾಲ ಎನ್.ಆರ್.ರವಿ ರಾಷ್ಟçಗೀತೆ ಹಾಡಿಸುವಂತೆ ಒತ್ತಾಯ ಮಾಡಿದರು. ಇದಕ್ಕೆ ಸ್ಫೀಕರ್ ಅನುಮತಿ ನೀಡದ ಹಿನ್ನೆಲೆಯಲ್ಲಿ ರಾಜ್ಯಪಾಲರು ಭಾಷಣವನ್ನೇ ಮಾಡದೆ, ಸದನದಿಂದ ಹೊರನಡೆದ ಘಟನೆ ನಡೆದಿದೆ.

