ಬೆಂಗಳೂರು: ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಏಪ್ರಿಲ್ ೧೫ರವರೆಗೆ ತೀರ್ಪನ್ನು ಕಾಯ್ದಿರಿಸಿದೆ.
ಬಸವರಾಜ್ ವಿರುದ್ಧ ದಾಖಲಾಗಿರುವ ಕೋಕಾ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಂತಿಮ ತೀರ್ಪನ್ನು ಏ.೧೫ಕ್ಕೆ ಕಾಯ್ದಿರಿಸಿತು. ಅಲ್ಲಿವರೆಗೆ ಬೈರತಿ ಬಸವರಾಜ್‌ಗೆ ನೀಡಿದ್ದ ನಿರೀಕ್ಷಣಾ ಜಾಮೀನು ಅವಧಿ ಮುಂದುವರಿಯಲಿದೆ.
ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಬಂಧನಕ್ಕೆ ಸಿಐಡಿ ಸಿದ್ಧತೆ ನಡೆಸಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬೈರತಿ ಅವರಿಗೆ ಜಾಮೀನು ನಿರಾಕರಿಸಿತ್ತು. ಹೀಗಾಗಿ, ಬಂಧನದ ಭೀತಿ ಎದುರಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಜಾಮೀನು ಮುಂದುವರಿಸುವ ಮೂಲಕ ಅವರಿಗೆ ರಿಲೀಫ್ ನೀಡಿದೆ.

