ಬೆಂಗಳೂರು: ಬೆಂಗಳೂರು ಯಾವತ್ತಿದ್ರೂ ಬಿಜೆಪಿಯ ಭದ್ರಕೋಟೆ. ಹೀಗಾಗಿ, ಜಿಬಿಎ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ತೀವಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಬಾಂಗ್ಲಾ ವಲಸಿಗರು, ಮುಸ್ಲಿಮರನ್ನು ನೆಚ್ಚಿಕೊಂಡಿದೆ. ಆದರೆ, ಬಿಜೆಪಿ ಬೆಂಗಳೂರು ಮತದಾರರ ಮನಗೆದ್ದಿದೆ. ಹೀಗಾಗಿ, ನಾವು ಬೆಂಗಳೂರಲ್ಲಿ ಗೆದ್ದೇ ಗೆಲ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಚುನಾವಣೆಗೆ ನಾವು ಈಗಾಗಲೇ ಸಿದ್ಧವಾಗಿದ್ದೇವೆ. ಮುಂಬೈ ಸೇರಿದಂತೆ ಮಹಾರಾಷ್ಟçದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಭಾರಿಸಿದೆ. ಅದೇ ರೀತಿ ಬೆಂಗಳೂರಿನಲ್ಲಿಯೂ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದರು.

