ಧಾರವಾಡ: ಧಾರವಾಡದಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯೊಬ್ಬಳನ್ನು ಕೊಲೆ ಮಾಡಿ, ಶವವನ್ನು ಸರ್ಕಲ್ ಬಳಿ ಬಿಸಾಕಿರುವ ಘಟನೆ ನಡೆದಿದೆ.
ಧಾರವಾಡದ ಗಾಂಧಿ ಸರ್ಕಲ್‌ನ ನಿವಾಸಿ 19 ವರ್ಷದ ಝಾಕಿಯಾ ಮುಲ್ಲಾ ಕೊಲೆಯಾಗಿರುವ ಯುವತಿ. ಈಕೆ ಪ್ಯಾರಾ ಮೆಡಿಕಲ್ ಕೋರ್ಸ್ ಮುಗಿಸಿದ್ದು, ನೆನ್ನೆ ಕೆಲಸ ಹುಡುಕಲು ಹೋಗುವುದಾಗಿ ಮನೆಯಿಂದ ಹೊರ ಹೋಗಿದ್ದಳು.
ನೆನ್ನೆ ಮನೆಯಿಂದ ಹೊರಹೋಗಿದ್ದ ಯುವತಿ ನಾಪತ್ತೆಯಾಗಿದ್ದು, ಇಂದು ಮನಸೂರು ವಿನಯ್ ಡೈರಿ ಬಳಿ ಶವ ಬಿಸಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನ 12 ಗಂಟೆ ಸುಮಾರಿ ಸ್ಥಳೀಯರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನು ಶವಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

