ಬೆಂಗಳೂರು: ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಂತೆ ನಡೆದುಕೊಂಡು, ಕಾನೂನುಬಾಹಿರವಾಗಿ ಅವರೇ ಬರೆದುಕೊಂಡು ಬಂದ ಭಾಷಣವನ್ನು ಓದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಅಧಿವೇಶನದಲ್ಲಿ ಮೂರೇ ಲೈನ್ ನಲ್ಲಿ ಭಾಷಣ ಮುಗಿಸಿ ತೆರಳಿದ ರಾಜ್ಯಪಾಲರ ನಡೆಯ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಕೇಂದ್ರ ಸರಕಾರದ ಮನ್‌ರೇಗಾ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಾವಣೆಯ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ. ಬಿಜೆಪಿಗರು ಕೇಂದ್ರ ಏನು ಮಾಡಿದರೂ ಸರಿ ಎಂದು ತೆಪ್ಪಗಾಗುತ್ತಾರೆ. ಆದರೆ, ನಾವು ಹೋರಾಟ ಮುಂದುವರಿಸುತ್ತೇವೆ ಎಂದರು.
ರಾಜ್ಯಪಾಲರು ಸರಕಾರದ ಸಚಿವ ಸಂಪುಟದಲ್ಲಿ ಬರೆದುಕೊಟ್ಟ ಭಾಷಣವನ್ನು ಓದಬೇಕಾಗಿರುವುದು ಅವರ ಸಂವಿಧಾನಬದ್ಧ ಕರ್ತವ್ಯ. ಆದರೆ, ಆ ನಿಯಮವನ್ನು ಉಲ್ಲಂಘಿಸಿ ರಾಝ್ಯಪಾಲರು ತಾವೇ ಬರೆದುಕೊಂಡು ಬಂದ ಭಾಷಣವನ್ನು ಓದುವ ಮೂಲಕ ಸಂವಿಧಾನವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

