ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಸ್ವಾಮೀಜಿಯೊಬ್ಬರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬAಧಿತ ಆರೋಪಿಯನ್ನು ಚಿಕ್ಕಮಗಳೂರು ಮೂಲದ ಸ್ಫೂರ್ತಿ ಎನ್ನಲಾಗಿದೆ. ಈಕೆ ಸ್ವಾಮೀಜಿಯೊಬ್ಬರಿಗೆ ಸುಮಾರು ೧ ಕೋಟಿ ರು. ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಹನಿಟ್ರಾö್ಯಪ್ ಹೆಸರಿನಲ್ಲಿ ಸ್ವಾಮೀಜಿಯಿಂದ ಆಕೆ ಈಗಾಗಲೇ ೪.೫ ಲಕ್ಷ ರು ವಸೂಲಿ ಮಾಡಿದ್ದು, ಇನ್ನೂ ಬಾಕಿ ಹಣ ಕೊಡುವಂತೆ ಪೀಡಿಸುತ್ತಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆ ಸ್ವಾಮೀಜಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಯುವತಿಯನ್ನು ಬಂಧಿಸಲಾಗಿದೆ.

