ಅಪರಾಧ ಸುದ್ದಿ

ಲೋಕಸಭವನದಲ್ಲಿ ಬಾಂಬ್ ಸ್ಟೋಟಿಸುವ ಬೆದರಿಕೆ

Share It

ಬೆಂಗಳೂರು: ಕರ್ನಾಟಕ ರಾಜಭವನಕ್ಕೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಇ-ಮೇಲ್ ಸಂದೇಶ ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಎನ್ನಲಾಗಿದೆ.

ರಾಜಭವನದ ಅಧಿಕೃತ ಇ-ಮೇಲ್ ಖಾತೆಗೆ ಬಂದ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿತ್ತು. ಇದರಿಂದ ಆತಂಕಗೊAಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಂಬ್ ನಿಷ್ಕಿçಯ ದಳ ಮತ್ತು ಶ್ವಾನದಳ ತಪಾಸಣೆ ನಡೆಸಿದರು.

ಸಂದೇಶದಲ್ಲಿ ಮಧ್ಯಾಹ್ನದೊಳಗೆ ಬಾಂಬ್ ಸ್ಟೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಆರ್‌ಡಿಎಕ್ಸ್ ಸ್ಫೋಟ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಗೈನಾ ರಮೇಶ್ ಔಟ್ ಲುಕ್ ಎಂಬ ಇ-ಮೇಲ್ ಖಾತೆಯಿಂದ ಸಂದೇಶ ಬಂದಿತ್ತು ಎನ್ನಲಾಗಿದೆ.

ತಪಾಸಣೆ ಕಾರ್ಯಾಚರಣೆಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲದ ಕಾರಣದಿಂದ ಇದೊಂದು ಹುಸಿ ಬಾಂಬ್ ಕರೆ ಎಂದು ತೀರ್ಮಾನಿಸಲಾಯಿತು. ಈ ಸಂಬAಧ ಜ.೨೦ರಂದು ಕೇಸ್ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.


Share It

You cannot copy content of this page