ಸುದ್ದಿ

Bellary: ಜನಾರ್ಧನ ರೆಡ್ಡಿ, ಶ್ರೀರಾಮುಲುಗೆ ಸೇರಿದ ಮಾಡೆಲ್ ಹೌಸ್ ಗೆ ಬೆಂಕಿ: ಕಿಡಿಗೇಡಿಗಳ ಕೃತ್ಯದ ಶಂಕೆ

Share It

ಬಳ್ಳಾರಿ: ಬಳ್ಳಾರಿಯಲ್ಲಿ ಗಲಭೆಯ‌ ಕರಿ ನೆರಳು ಕಡಿಮೆಯಾಗುವಂತೆ ಕಾಣುತ್ತಿಲ್ಲ, ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಯ ಬೆನ್ನಲ್ಲೇ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಸೇರಿದ ಜಿ ಸ್ಕೈರ್ ಲೇಔಟ್ ನ ಮಾಡೆಲ್ ಹೌಸ್ ಬೆಂಕಿಗಾಹುತಿಯಾಗಿದೆ.

ಘಟಮೆಯ ಹಿಂದೆ ಭರತ್ ರೆಡ್ಡಿ ಬೆಂಬಲಿಗರೇ ಇದ್ದಾರೆ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ. ಲೇಔಟ್ ನಲ್ಲಿ ಜನರಿಗೆ ತೋರಿಸುವುದಕ್ಕಾಗಿ ಮಾಡೆಲ್ ಹೌಸ್ ಕಟ್ಟಿಸಿದ್ದೆವು. ಈ ಮನೆಗೆ ಡಿಸೇಲ್, ಪೆಟ್ರೋಲ್ ಹಾಕಿ 10-15 ಜನರು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಮನೆಯಲ್ಲಿನ ಎಲ್ಲ ಪಿಠೋಪಕರಣಗಳು ಸುಟ್ಟು ಹೋಗಿವೆ. ಎಲ್ಲ ಗ್ಲಾಸ್​ ಪುಡಿಪುಡಿಯಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಹೊಸ ವರ್ಷದ ದಿನದ ಗಲಾಟೆಯಲ್ಲಿ ಭಾಗಿಯಾಗಿದ್ದ ಭರತ್ ರೆಡ್ಡಿ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ. ಬೆಂಕಿ ಹಚ್ಚಿದವರನ್ನು ಹಿಡಿಯಲು ನಮ್ಮವರು ಪ್ರಯತ್ನಿಸಿದ್ದಾರೆ. ಆದರೆ, ಓರ್ವ ಮಾತ್ರ ಸಿಕ್ಕಿದ್ದು, ಆತನ ಫೋಟೋ ತೆಗೆದುಕೊಂಡಿದ್ದೇವೆ. ಈ ಕುರಿತು ಎಸ್​ಪಿ ಅವರ ಜೊತೆಗೂ ಮಾತನಾಡಿರುವೆ ಎಂದರು.

ನನಗೆ ಆರೂವರೆ ಗಂಟೆಗೆ ಈ ಬಗ್ಗೆ ಗೊತ್ತಾಗಿದೆ. ಮನೆಯಲ್ಲಿನ ಬಾಗಿಲು, ಕುರ್ಚಿ, ಬೆಡ್ ಸೇರಿ ಎಲ್ಲ ಪಿಠೋಪಕರಣಗಳು ಸುಟ್ಟಿವೆ. ಗ್ಲಾಸ್ ಬಾಗಿಲನ್ನು ಪುಡಿಪುಡಿ ಮಾಡಿದ್ದಾರೆ. ಬಳ್ಳಾರಿ ಭಸ್ಮ ಮಾಡುತ್ತೇನೆಂದು ಶಾಸಕರು ಹೇಳಿದ್ದರು. ಅದರಂತೆ ಅವರ ಬೆಂಬಲಿಗರೇ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಬೇಕಿದೆ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.


Share It

You cannot copy content of this page