ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕೊಳಗೇರಿ ಅಭಿವೃದ್ಧಿ ನಿಗಮದಿಂದ ಮನೆಗಳ ಹಂಚಿಕೆ ಕಾರ್ಯಕ್ರಮದ ಕಟೌಟ್ ಕಳಚಿಬಿದ್ದು, ಒಬ್ಬರು ಮಹಿಳೆ ಸೇರಿ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಮಂಟೂರು ರಸ್ತೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಈ ಸುತ್ತಮುತ್ತ ಸಿಎಂ ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್ ಅವರ ಬೃಹತ್ ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಈ ಕಟೌಟ್ ಒಂದೊAದ ಮೇಲೊಂದು ಬಿದ್ದಿದ್ದು, ಅವುಗಳ ಕೆಳಗಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಬ್ಯಾಹಟ್ಟಿ ನಿವಾಸಿ ಶಂಕರ್ ಹಡಪದ(೩೨) ಗಣಗಾಧರ ನಗರದ ಶಾಂತಾ, ಮಂಜುನಾಥ್ ಪರ್ಣೀಕರ್(೩೩) ಎಂದು ಗಉರುತಿಸಲಾಗಿದೆ. ಇವರ ಪೈಕಿ ಶಂಕರ್ ಹಡಪದ ಮತ್ತು ಶಾಂತಾ ಅವರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಮಂಜುನಾಥ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

