ಬೆಂಗಳೂರು: ಸಮಾಜದಲ್ಲಿನ ಜಾತಿ ಅಸಮಾನತೆ ಮತ್ತು ಸಂವಿಧಾನದ ಮೌಲ್ಯದ ಸುತ್ತ ಚಿತ್ರೀಕರಿಸಿರುವ ದುನಿಯಾ ವಿಜಯ್ ನಾಯಕತ್ವದ “ಲ್ಯಾಂಡ್ ಲಾರ್ಡ್” ಸಿನಿಮಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಕೋರಿದರು.
ನಾನೂ ಸಿನಿಮಾ ನೋಡ್ತೀನಿ ಎಂದು ದುನಿಯಾ ವಿಜಯ್ ಅವರಿಗೆ ಭರವಸೆ ನೀಡಿದ ಮುಖ್ಯಮಂತ್ರಿಗಳು ಪ್ರತಿಯೊಬ್ಬರೂ ಸಿನಿಮಾ ವೀಕ್ಷಿಸಲು ಕರೆ ನೀಡಿದರು.

