ಬಳ್ಳಾರಿ: ಜನಾರ್ದನ ರೆಡ್ಡಿ ಅವರ ಮಾಡೆಲ್ ಹೌಸ್‌ಗೆ ಬೆಂಕಿಹಚ್ಚಿದ ಆರೋಪದಲ್ಲಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇವರ ಪೈಕಿ ಆರು ಮಂದಿ ಅಪ್ರಾಪ್ತರು ಎಂದು ಹೇಳಲಾಗಿದೆ.
ಆರೋಪಿಗಳನ್ನು ಕೌಲ್ ಬಜಾರ್‌ನ ಸಾಹಿಲ್ ಮತ್ತು ಅಸ್ತಮ್ ಆಲಿಯಾಸ್ ಸುರೇಶ್ ಸೇರಿ ಮತ್ತೇ ಆರು ಮಂದಿ ಅಪ್ರಾಪ್ತರು ಎನ್ನಲಾಗಿದೆ. ಆರೋಪಿಗಳು ರೀಲ್ಸ್ ಮಾಡುವ ಉದ್ದೇಶದಿಂದ ಮನೆಯ ಬಳಿ ತೆರಳಿದ್ದು, ಆಕಸ್ಮಿಕವಾಗಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಜನಾರ್ದನ ರೆಡ್ಡಿ ಕಡೆಯವರು ಬೆಂಕಿ ಅವಘಡಕ್ಕೆ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿದ್ದು, ಬೆಂಕಿಯಿAದಾಗಿ ಸುಮಾರು ೧.೨೦ಕೋಟಿ ರು. ನಷ್ಟವಾಗಿದೆ. ಬ್ಯಾನರ್ ಗಲಾಟೆಗೆ ಸಂಬAಧಿಸಿದAತೆ ಸೇಡು ಮುಂದುವರಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

