ಚಿತ್ರದುರ್ಗ: ಆಪೆ ಗಾಡಿಯಲ್ಲಿ ಮಕ್ಕಳನ್ನು ತುಂಬಿ ಕಳುಹಿಸಿದ್ದ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷö್ಯದಿಂದ ಎಂಟು ಮಕ್ಕಳು ಗಂಭೀರವಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗದ ಶರಣಬಸವೇಶ್ವರ ಶಾಲೆಯ ೧೭ ವಿದ್ಯಾರ್ಥಿಗಳನ್ನು ಗಣರಾಜ್ಯೋತ್ಸವ ದಿನದ ಕಾರ್ಯಕ್ರಮದ ತಾಲೀಮಿಗೆ ಕಳುಹಿಸಲಾಗಿತ್ತು. ಅವರನ್ನೆಲ್ಲ ಆಪೆ ಗಾಡಿಯಲ್ಲಿ ತುಂಬಿ ಕಳುಹಿಸಿದ್ದ ಆಡಳಿತ ಮಂಡಳಿಯ ನಿರ್ಲಕ್ಷö್ಯದಿಂದ ಅಪಘಾತ ಸಂಭವಿಸಿದೆ.
೧೬ ವಿದ್ಯಾರ್ಥಿಗಳನ್ನು ತುಂಬಿದ್ದ ಆಪೆ ಗಾಡಿ ಚಿತ್ರದುರ್ಗ ಬಸ್ ಡಿಪೋ ಬಳಿ ಬಂದಾಗ ಡಿಪೋದಿಂದ ಆಚೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಆಪೆ ಗಾಡಿ ಉರುಳಿಬಿದ್ದಿದ್ದು, ಎಂಟು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

