ಬೆಂಗಳೂರು: KSRTC ನೌಕರರು ಯಾವುದೇ ರೀತಿಯ ಪ್ರತಿಭಟನೆಗೆ ಮುಂದಾಗುವAತಿಲ್ಲ ಎಂದು ಸರಕಾರ ಖಡಕ್ ಎಚ್ಚರಿಕೆ ನೀಡಿದೆ.
ಸಾರಿಗೆ ನೌಕರರು ಮುಷ್ಕರ ನಡೆಸುವ ಎಚ್ಚರಿಕೆ ನೀಡಲಾಗಿತ್ತು.ಗುರುವಾರ ಬೆಂಗಳೂರು ಚಲೋ ನಡೆಸಲು ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದವು. ಹೀಗಾಗಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆ, ಹಾಗೂ ಕೆಲಸಕ್ಕೆ ಹಾಜರಾಗದಿದ್ದರೆ, ವೇತನ ಕಟ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಚಿಕ್ಕಮಗಳೂರು ವಿಭಾಗದಿಂದ ಈಗಾಗಲೇ ನೌಕರರಿಗೆ ಎಚ್ಚರಿಕೆಯ ನೊಟೀಸ್ ನೀಡಲಾಗಿದ್ದು, ಶಿಸ್ತು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. ಗುರುವಾರ ಯಾರೂ ಕೆಲಸಕ್ಕೆ ಗೈರಯಹಾಜರಾಗುವಂತಿಲ್ಲ ಎಂದು ತಿಳಿಸಲಾಗಿದೆ.

