ಬೆಂಗಳೂರು: ರಾಜ್ಯದ ಹಿರಿಯ ಕಾರ್ಮಿಕ ನಾಯಕರು ಹಾಗೂ ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷರಾದ ಕಾಂ. ಹೆಚ್. ವಿ. ಅನಂತ ಸುಬ್ಬರಾವ್ ಅವರು ನಿಧನರಾಗಿದ್ದಾರೆ.
ಅನಂತ ಸುಬ್ಬರಾವ್ ಅವರು ದಶಕಗಳ ಕಾಲ ಸಾರಿಗೆ ಸಂಸ್ಥೆಯ ನೌಕರರ ಹಿತರಕ್ಷಣೆಗಾಗಿ ಮತ್ತು ಕಾರ್ಮಿಕ ವರ್ಗದ ನ್ಯಾಯಯುತ ಹಕ್ಕುಗಳಿಗಾಗಿ ಅವಿರತವಾಗಿ ಹೋರಾಡಿದವರು. ಅವರ ಅಗಲಿಕೆಯಿಂದ ರಾಜ್ಯದ ಕಾರ್ಮಿಕ ಚಳುವಳಿ ಪ್ರಬಲ ಧ್ವನಿ ಇಲ್ಲದಂತಾಗಿದೆ.
ಅನಂತ ಸುಬ್ಬಾರಾವ್ ನಿಧನದ ಹಿನ್ನೆಲೆಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ, ಸಂತಾಪ ವ್ಯಕ್ತಪಡಿಸಿದ್ದಾರೆ. ಕಾರ್ಮಿಕ ಸಂಘಟನೆ ನಾಯಕರಾಗಿ ಅವರು ಸಲ್ಲಿಸಿದ ಸೇವೆ ಶ್ಲಾಘಿಸಿರುವ ಅವರು, ಅದ್ಭುತ ಕಾರ್ಮಿಕ ನಾಯಕನೊಬ್ಬನನ್ನು ಕಳೆದಕೊಂಡು ನಾಡು ಬಡವಾಗಿದೆ ಎಂದು ತಿಳಿಸಿದ್ದಾರೆ.

