ಬೆಂಗಳೂರು: ಖಾಸಗಿ ಬಿಲ್ಡಿಂಗ್ವೊಂದರ ಸ್ಲೈಡಿಂಗ್ ಗೇಟ್ ಮುರಿದುಬಿದ್ದ ಪರಿಣಾಮ ಸೆಕ್ಯುರಿಟಿ ಕೆಲಸಕ್ಕೆ ನೇಮಕವಾಗಿದ್ದ ಗಾರ್ಡ್ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರು ನಗರದ ಬಾಗಲಗುಂಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ಸೆಕ್ಯುರಿಟಿ ಗಾರ್ಡ್ ಅನ್ನು55 ವರ್ಷದ ಸ್ವಾಮಿ ಎಂದು ಗುರುತಿಸಲಾಗಿದೆ. ಈತ ಅನೇಕ ದಿನಗಳಿಂದ ಬಿಲ್ಡಿಂಗ್ ಸೆಕ್ಯುರಿಟಿ ಕೆಲಸಕ್ಕೆ ನಿಯೋಜನೆಗೊಂಡಿದ್ದ ಎನ್ನಲಾಗಿದೆ.
ಸ್ಲೈಡಿಂಗ್ ಗೇಟ್ ಮುರಿದು ಸೆಕ್ಯುರಿಟಿ ಗಾರ್ಡ್ ಸ್ವಾಮಿಯ ಮೇಲೆ ಬಿದ್ದಿದೆ. ಇದೇ ಕಾರಣಕ್ಕೆ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಬಾಗಲಕುಂಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

