ಅಪರಾಧ ಸುದ್ದಿ

ಬೆಂಗಳೂರು: ಸ್ವಂತ ಅಣ್ಣನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ತಮ್ಮ

Share It

ಬೆಂಗಳೂರು : ಸ್ವಂತ ಅಣ್ಣನನ್ನೆ ತಮ್ಮನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರದಲ್ಲಿ ಘಟನೆ ನಡೆದಿದ್ದು, ಅಣ್ಣ ಬಾಲರಾಜ್‌ನನ್ನು ತಮ್ಮ ಅಂಥೋಣಿ ರಾಜ್ ಎಂಬಾತನೇ ಹತ್ಯೆ ಮಾಡಿದ್ದಾನೆ.

ಕೆಲಸ ಮುಗಿಸಿಕೊಂಡು ಮನೆಗೆ ಬಂದ ಅಣ್ಣನ ಮೇಲೆ ಅಂಥೋಣಿ ರಾಜ್ ಏಕಾಏಕಿ ದಾಳಿ ನಡೆಸಿ, ಆತನನ್ನು ಕಳಗೆ ಬೀಳಿಸಿ, ನಂತರ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೊಲೆ ಮಾಡಿದ್ದಕ್ಕೆ ನಿಖರ ಕಾರಣ ಏನೆಂಬುದು ಗೊತ್ತಾಗಿಲ್ಲ.


Share It

You cannot copy content of this page