ಅಪರಾಧ ಸುದ್ದಿ

14 ವರ್ಷದ ಬಾಲಕನಿಗೆ ಆನ್‌ಲೈನ್ ಗೇಮ್ ಚಟ: ಇಡೀ ಕುಟುಂಬವೇ ಸರ್ವನಾಶ

Share It

ಬೆಂಗಳೂರು: 14 ವರ್ಷದ ಬಾಲಕನ ಆನ್‌ಲೈನ್ ಗೇಮ್ ಚಟಕ್ಕೆ ಇಡೀ ಕುಟುಂಬವೇ ಸರ್ವನಾಶವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಿಹಾರದಲ್ಲಿ ನಡೆದ ಕರ್ನಾಟಕದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ ಪೊಲೀಸರಿಗೆ ಇಂತಹದ್ದೊಂದು ಭಯಂಕರವಾದ ಸತ್ಯ ಗೊತ್ತಾಗಿದ್ದು, ಈ ನಾಲ್ವರ ಆತ್ಮಹತ್ಯೆ ಹಿಂದೆ ಮತ್ತೊಂದು ಕೊಲೆ ಪ್ರಕರಣವಿರುವುದು ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ಒಂದೇ ಕುಟುಂಬದ ಸದಸ್ಯರ ಪೈಕಿ ನಾಗಪ್ರಸಾದ್, ಆನ್‌ಲೈನ್ ಚಟಕ್ಕೆ ಬಿದ್ದಿದ್ದ ತನ್ನ ಅಕ್ಕನ ಮಗ ಅಮೋಘಕೀರ್ತಿಯನ್ನು ಆಗಸ್ಟ್‌ 8ರಂದು ಕೊಲೆ ಮಾಡಿದ್ದ. ತಾನು ಕೊಲೆ ಮಾಡಿದ್ದರ ಕುರಿತು ಬಹಳ ನೊಂದುಕೊಂಡು, ಇಡೀ ಕುಟುಂಬದ ಜತೆಗೆ ಬಿಹಾರದ ರಾಜಗೀರ್ ಜೈನ ಮಂದಿರಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅಮೋಘ ಫ್ರೀ ಫೈರ್ ಆಟಕ್ಕೆ ದಾಸನಾಗಿದ್ದ, ಇದರಿಂದಾಗಿ ಅವರ ಮಾವ ನಾಗಪ್ರಸಾದ್ ಆತನನ್ನು ಕೊಂದಿದ್ದ, ಹೀಗಾಗಿ, ನಾಗಪ್ರಸಾದ್ ಜತೆಗೆ ಜಿ.ಆರ್. ಶಿಲ್ಪಾ, ಜಿ.ಆರ್. ಶ್ರುತಾ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Updating….


Share It

You cannot copy content of this page