ಶಿವಮೊಗ್ಗ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪ್ರಾಧ್ಯಾಪಕನಿಗೆ ಯುವತಿ ಪೋಷಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಕೊಳಗಿಬೀಸ್ ಕಾಲೇಜು ಪ್ರಾಧ್ಯಾಪಕ ಎಂ.ಆರ್.ಆದರ್ಶ ಎಂಬಾತನಿಗೆ ಯುವತಿಯ ಪೋಷಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆತ ಯುವತಿಗೆ ಅನೇಕ ದಿನಗಳಿಂದಲೂ ಲೈಂಗಿಕ ಕಿರುಕುಳ ನೀಡುತ್ತಿದ್ದು, ಯುವತಿ ಪೋಷಕರಿಗೆ ತಿಳಿಸಿದ ನಂತರ ಘಟನೆ ನಡೆದಿದೆ.
ದರ್ಶನ್ ಹಿಂದೆ ಕೆಲಸ ಮಾಡುತ್ತಿದ್ದ ಶಿರಸಿ ಕಾಲೇಜಿನಲ್ಲಿಯೂ ಇದೇ ರೀತಿ ಯುವತಿಗೆ ಕಿರುಕುಳ ನೀಡಿ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ. ಅನಂತರವೇ ಕಾಲೇಜು ಆಡಳಿತ ಮಂಡಳಿ ಆತನನ್ನು ಬೇರೆ ಕಾಲೇಜಿಗೆ ವರ್ಗಾವಣೆ ಮಾಡಿತ್ತು.

