ಉಪಯುಕ್ತ ಸುದ್ದಿ

ತೆಕ್ಕಲಕೋಟೆ ಗುಡ್ಡದಲ್ಲಿ ಮಾನವ ಅಸ್ಥಿಪಂಜರ ಪತ್ತೆ: ಅಮೇರಿಕದ ಸಂಶೋಧಕರ ತಂಡದಿಂದ ಉತ್ಖನನ

Share It

ಬಳ್ಳಾರಿ: ಸುಮಾರು 5 ಸಾವಿರ ವರ್ಷದಷ್ಟು ಹಳೆಯದಾಗಿರಬಹುದಾದ ಮಾನವನ ಅಸ್ಥಿಪಂಜರಗಳು
ಯಾವುದೇ ಹಾನಿಯಾಗದ ರೀತಿಯುಲ್ಲಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಗುಡ್ಡದಲ್ಲಿ ಪತ್ತೆಯಾಗಿವೆ.

ಈ ಅಸ್ಥಿಪಂಜರಗಳು ಸುಮಾರು ಮೂರದಿಂದ ಐದು ಸಾವಿರ ವರ್ಷಗಳಷ್ಟು ಹಳೆಯದಾಗಿದ್ದು,
ಪ್ರಾಗೈತಿಹಾಸಿಕ ಕಾಲದ ಕುರುಹುಗಳಾಗಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಅಮೇರಿದ ಸಂಶೋಧಕರ ನೇತೃತ್ವದ ತಂಡದಿಂದ ಉತ್ಖನನ ನಡೆಯುತ್ತಿದ್ದು, ಮಾನವನ ಮೃತ ದೇಹದ ಮೇಲೆ ಕಲ್ಲು ಇಟ್ಟು ಸಂಸ್ಕಾರ ಮಾಡಿರುವುದು ಕಂಡುಬಂದಿದೆ.

ಅಂತ್ಯಸಂಸ್ಕಾರದಲ್ಲಿ ಬಳಸುವ ವೈಜ್ಞಾನಿಕ ವಿಧಾನಗಳನ್ನು ಐದು ಸಾವಿರ ವರ್ಷಗಳಷ್ಟು ಹಿಂದೆಯೇ ಅಳವಡಿಸಿಕೊಂಡಿರುವ ಬಗ್ಗೆ ಅಧ್ಯಯನ ನಡೆಯುತ್ತಿದೆ.


Share It

You cannot copy content of this page