ರಾಜಕೀಯ ಸುದ್ದಿ

ಜ. ನರವಣೆ ಅವರ ಪುಸ್ತಕ ಪ್ರಕಟವಾಗಿಯೇ ಇಲ್ಲ: ಪ್ರಶಾಸನ ಸಂಸ್ಥೆಯಿಂದ ಸ್ಪಷ್ಟನೆ

Share It

ನವದೆಹಲಿ: ಜನರಲ್ ನರವಣೆ ಅವರ ಆತ್ಮಚರಿತ್ರೆ ಪುಸ್ತಕದ ಕುರಿತು ಲೋಕಸಭೆಯಲ್ಲಿ ಗದ್ದಲವಾಗುತ್ತಿರುವ ಬೆನ್ನಲ್ಲೇ, ಈ ಪುಸ್ತಕ ಅಧಿಕೃತವಾಗಿ ಮುದ್ರಣವೇ ಆಗಿಲ್ಲ ಎಂದು ಪ್ರಕಾಶನ ಸಂಸ್ಥೆ ಸ್ಪಷ್ಟನೆ ನೀಡಿದೆ.

ಲೋಕಸಭೆಯಲ್ಲಿ ಜನರಲ್ ಮನೋಜ್ ಮುಕುಂದ್ ನರವಣೆ ಅವರ ಆತ್ಮಚರಿತ್ರೆ ಫೋರ್ ಸ್ಟಾರ್ ಆಫ್ ಡೆಸ್ಟಿನಿ ಪುಸ್ತಕದಲ್ಲಿರುವ ಕೆಲ ವಿಷಯಗಳ ಕುರಿತು ಭಾರಿ ಗದ್ದಲ ಏರ್ಪಟ್ಟಿತ್ತು. ವಿಪಕ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪುಸ್ತಕದಲ್ಲಿರುವ ಕೆಲ ಅಂಶಗಳನ್ನಿಟ್ಟುಕೊಂಡು ಆರೋಪಗಳನ್ನು ಮಾಡಿದ್ದವು. ಆದರೆ, ಇದೀಗ ಪುಸ್ತಕ ಪ್ರಕಾಶನ ಸಂಸ್ಥೆ ಪುಸ್ತಕ ಅಧಿಕೃತವಾಗಿ ಮುದ್ರಣವೇ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಪುಸ್ತಕದ ಪ್ರಕಾಶನದ ಹಕ್ಕನ್ನು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸಂಸ್ಥೆ ಹೊಂದಿದ್ದು, ಈವರೆಗೆ ಂದು ಪುಸ್ತಕವೂ ಅಧಿಕೃತವಾಗಿ ಮುದ್ರಣವಾಗಿಲ್ಲ. ಪ್ರಸ್ತುತ ಪ್ರಸಾರವಾಗುತ್ತಿರುವ ಪುಸ್ತಕದ ಯಾವುದೇ ಆವೃತ್ತಿ ಪೂರ್ಣವಾಗಿ ಅಥವಾ ಬಾಗಶಃ ಮುದ್ರಣ ಅಥವಾ ಪಿಡಿಎಫ್ ರೂಪದಲ್ಲಿ ಪ್ರಸಾರವಾಗುತ್ತಿದ್ದರೆ ಅದು ಹಕ್ಕುಸ್ವಾಮ್ಯದ ಉಲ್ಲಂಘನೆಯಾಗುತ್ತದೆ. ಹೀಗಾಗಿ, ಅದನ್ನು ಕೂಡಲೇ ನಿಲ್ಲಸಬೇಕು. ಇಲ್ಲವಾದಲ್ಲಿ ನಧಿಕೃತ ಪ್ರಸಾರದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಪ್ರಕಾಶಕರ ಅನುಮೋದನೆ ಪಡೆಯದೆ ಸೋರಿಕೆ ಅಥವಾ ಉಲ್ಲಂಘನೆ ಮಾಡಿದ ಆರೋಪದಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ರಾಹುಲ್ ಗಾಂಧಿ ರಾಷ್ಟ್ರಪತಿಗಳ ಭಾಷಣದ ಚರ್ಚೆ ಸಂದರ್ಭದಲ್ಲಿ ಈ ಪುಸ್ತಕ ಪ್ರದರ್ಶಿಸಿ, ಅದರಲ್ಲಿರುವ ವಿವಾದಾತ್ಮಕ ಅಂಶಗಳನ್ನು ಚರ್ಚಿಸಲು ಅನುಮತಿ ಕೇಳಿದ್ದರು. ಇದು ಭಾರಿ ಗದ್ದಲಕ್ಕೆ ಕಾರಣವಾಗಿತ್ತು.


Share It

You cannot copy content of this page