ಬೆಂಗಳೂರು: ಬೆಂಗಳೂರಿನ ಪುಟ್ಪಾತ್ ಮೇಲೆ ವ್ಯಾಪಾರ ಮಾಡುವವರಿಗೆ ದಂಡ ಹಾಕಿ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಶಾ ಟ್ವಿಟ್ ಮಾಡಿದ್ದಾರೆ.
ಪುಟ್ಪಾತ್ ಮೇಲೆ ಇಟ್ಟುಕೊಂಡ ಆಟಿಕೆ ಸಾಮಾನು ಮಾರಾಟ ಮಾಡ್ತಿದ್ದ ಫೋಟೋವೊಂದನ್ನು ಪೋಸ್ಟ್ ಮಾಡಿರುವ ಅವರು, ಜಿಬಿಎ ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಪುಟ್ಪಾತ್ ಮೇಲೆ ವ್ಯಾಪಾರ ಮಾಡುವವರ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ದಂಡ ಹಾಕಿ ಮುಂದೆ ಪುಟ್ ಪಾತ್ನಲ್ಲಿ ವ್ಯಾಪಾರ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಬಯೋಕಾನ್ ಮುಖ್ಯಸ್ಥೆಯ ಟ್ವೀಟ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಂತಹ ವ್ಯಾಪಾರಿಗಳಿಂದ ಸಂಚಾರ ವ್ಯವಸ್ಥೆಗೆ ಬಹಳಷ್ಟು ಅಡಚಣೆಯಾಗುತ್ತಿದೆ. ಸರಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಕೆಲವರು ಬೆಂಬಲ ಸೂಚಿಸಿದ್ದರೆ, ಬೆಂಗಳೂರಿನಲ್ಲಿ ಇಂತಹ ಸಾವಿರಾರು ಜನರು ಪುಟ್ಪಾತ್ ವ್ಯಾಪಾರದಿಂದಲೇ ಜೀವನ ಕಟ್ಟಿಕೊಂಡಿದ್ದರೆ, ಅವರ ಜೀವನ ಕಿತ್ತುಕೊಳ್ಳುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ.

