ಅಪರಾಧ ರಾಜಕೀಯ ಸುದ್ದಿ

ಮೂಡಾ ಸೈಟ್ ಹಗರಣ: ಸಿಎಂಗೆ ಕ್ಲಿನ್ ಚಿಟ್, ಸೈಟ್ ಪಡೆದ ಉಳಿದವರಿಗೆ ಲೋಕಾಯುಕ್ತ ನೊಟೀಸ್

Share It

ಬೆಂಗಳೂರು: ಮೂಡಾದಲ್ಲಿ 50:50 ಅನುಪಾತದಲ್ಲಿ ನಿವೇಶನ ಪಡೆದಿರುವ ನೇಕರಿಗೆ ಲೋಕಾಯುಕ್ತ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಮೂಡಾ ಹಗರಣಕ್ಕೆ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಎಸ್.ಪಿ. ಉದೇಶ್ ನೇತೃತ್ವದ ತಂಡದಿಂದ ನೊಟೀಸ್ ಜಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲಿನ್ ಚಿಟ್ ನೀಡಿರುವ ಲೋಕಾಯುಕ್ತ ಉಳಿದವರಿಗೆ ನೊಟೀಸ್ ನೀಡಿದೆ.

ಸುಮಾರು 40ಕ್ಕೂ ಅಧಿಕ ಜನರಿಗೆ ನೊಟೀಸ್ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದು, ಪ್ರಕರಣದಲ್ಲಿ ಸಿಎಂಗೆ ಕ್ಲಿನ್ ಚಿಟ್ ನೀಡಿದ ಲೋಕಾಯುಕ್ತ ಅದೇ ಮಾದರಿಯಲ್ಲಿ ನಿವೇಶನ ಪಡೆದುಕೊಂಡಿರುವ ಉಳಿದವರಿಗೆ ನೊಟೀಸ್ ನೀಡಿರುವುದೇಕೆ ಎಂದು ಪ್ರಶ್ನಿಸುತ್ತಿದ್ದಾರೆ.


Share It

You cannot copy content of this page