ಅಪರಾಧ ಸುದ್ದಿ

ಅವಧಿ ಮುಗಿದ ಐಸ್ ಕ್ರೀಂ, ತಿಂಡಿ-ತಿನಿಸು ಮಾರಾಟ: ಅಧಿಕಾರಿಗಳಿಂದ ದಾಳಿ

Share It

ದೇವನಹಳ್ಳಿ: ಬೇಕರಿಗಳಲ್ಲಿ ಅವಧಿ ಮುಗಿದ ತಿಂಡಿ ತಿನಿಸುಗಳ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ದೆೇವನಹಳ್ಳಿ ಪಟ್ಟಣದ ಬೇಕರಿಗಳ ಮೇಲೆ ದಾಳಿ ನಡೆಸಿದ ತಹಸೀಲ್ದಾರ್ ಅನಿಲ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಶಿವಮೂರ್ತಿ ನೇತೃತ್ವದ ತಂಡ ಅವಧಿ ಮುಗಿದ ಜ್ಯೂಸ್, ಐಸ್ ಕ್ರೀಂ ಮತ್ತು ತಿಂಡಿ-ತಿನಿಸುಗಳನ್ನು ವಶಪಡಿಸಿಕೊಂಡಿತು.

ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ, ದಂಡ ವಸೂಲಿ ಮಾಡಿದ್ದಲ್ಲದೆ, ಇನ್ನು ಮುಂದೆ ಇದೇ ರೀತಿ ಮುಂದುವರಿದರೆ ಕಠಿಣ ಶಿಕ್ಷೆಗೆ ಗುರಿಯಾಗಿಸುವ ಎಚ್ಚರಿಕೆ ನೀಡಲಾಯಿತು. ಪುರಸಭೆ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಮತ್ತು ಪೊಲೀಸರು ದಾಳಿಯ ವೇಳೆ ಭಾಗವಹಿಸಿದ್ದರು.


Share It

You cannot copy content of this page