ಅಪರಾಧ ಸುದ್ದಿ

ಕ್ಷುಲ್ಲಕ ಕಾರಣಕ್ಕೆ ಡಿಲಿವೆರಿ ಬಾಯ್ ಮೇಲೆ ಹಲ್ಲೆ : ಗಾಯಾಳುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

Share It

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಡಿಲೆವರಿ ಬಾಯ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ರಾಜಧಾನಿ ಬೆಂಗಳೂರು ನಗರದಲ್ಲಿ ನಡೆದಿದೆ.

ನಗರದ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಮದ್ ಎಂಬ ಡೊಮಿನೋಸ್ ಫಿಜ್ಜಾ ಡೆಲಿವರಿ ಬಾಯ್ ಗಾಯಗೊಂಡವರು. ಆತನ ಮೇಲೆ ಹಲ್ಲೆ ನಡೆಸಿದಾತನನ್ನು ವಿಜ್ಞೇಶ್ ಎಂದು ಗುರುತಿಸಲಾಗಿದೆ.

ಆರ್ಡರ್ ಪಡೆಯಲು ಶಾಪ್ ಗೆ ತೆರುವ ವೇಳೆ ಏಕಾಏಕಿ ವಿಶ್ನೇಶ್ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಗಾಯಾಳು ಸಮದ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜ್ಞೇಶ್ ಮುಖಕ್ಕೆ ಪಂಚ್ ಮಾಡಿದ ಕಾರಣದಿಂದ ಸಮದ್‌ನ ಮೂಗು ಮತ್ತು ಮುಖದಲ್ಲಿ ರಕ್ತಸ್ರಾವವಾಗಿದೆ. ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.


Share It

You cannot copy content of this page