ಅಪರಾಧ ರಾಜಕೀಯ ಸುದ್ದಿ

ಆರ್‌ಜೆಡಿ ಸಂಸದ ಪಪ್ಪು ಯಾದವ್‌ಗೆ ಜಾಮೀನು: ಮೂರು ದಿನಗಳ ಹಿಂದೆ ಬಂಧಿತರಾಗಿದ್ದ ಪಪ್ಪು

Share It

ಪಾಟ್ನಾ: ಕಳೆದ ಶುಕ್ರವಾರ ಬಂಧಿತರಾಗಿದ್ದ ಆರ್‌ಜೆಡಿ ಮುಖಂಡ ಹಾಗೂ ಸಂಸದ ಪಪ್ಪು ಯಾದವ್‌ಗೆ ಪಾಟ್ನಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

31 ವರ್ಷ ಹಳೆಯ ಪ್ರಕರಣವೊಂದರಲ್ಲಿ ಪಪ್ಪು ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದರು. ಕಳೆದ ಶುಕ್ರವಾರ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಇದೀಗ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.

1995ರಲ್ಲಿ ನಡೆದಿದ್ದ ಪೋರ್ಜರಿ ಪ್ರಕರಣವೊಂದರಲ್ಲಿ ಪಪ್ಪಿ ಯಾದವ್ ಅವರನ್ನು ಬಂಧಿಸಲಾಗಿತ್ತು. ಪಪ್ಪು ಯಾದವ್ ಪೂರ್ಣಿಯಾ ಕ್ಷೇತ್ರದ ಸಂಸದರಾಗಿದ್ದು, ಕಳೆದ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿ ಕೂಟದ ಸಿಎಂ ಅಭ್ಯರ್ಥಿಯಾಗಿದ್ದರು.


Share It

You cannot copy content of this page