ಬೆಂಗಳೂರು: ವಂದೇ ಮಾತರಂ ಗೀತೆಯನ್ನು ಅಧಿಕೃತ ಗೀತೆ ಎಂದು ತೀರ್ಮಾನಿಸಿರುವ ಕೇಂದ್ರ ಸರಕಾರ ಗೀತೆಗೆ ಅವಮಾನಿಸಿದರೆ ಮೂರು ವರ್ಷಗಳ ಶಿಕ್ಷೆಗೆ ಒಳಪಡಿಸಲು ತೀರ್ಮಾನಿಸಿದೆ.
ಕೇಂದ್ರದಿಂದ ವಂದೆ ಮಾತರಂ ಪಠಣಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಗೀತೆಗೆ ರಾಷ್ಟ್ರಗೀತೆಯಷ್ಟೇ ಪ್ರಾಮುಕ್ಯತೆ ನೀಡಿ ಆದೇಶ ಮಾಡಿದೆ.
ವಂದೇ ಮಾತರಂ ಗೀತೆಯನ್ನು 3.10 ಸೆಕೆಂಡ್ನಲ್ಲಿ ಪಠಣ ಮಾಡುವುದು ಕಡ್ಡಾಯ, ಗೀತೆಯ ಆರು ಚರಣಗಳನ್ನು ಹಾಡುವುದು ಕಡ್ಡಾಯ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಕೋಮುಸೌಹಾರ್ಧತೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ 1937ರಲ್ಲಿ ನಾಲ್ಕು ಸಾಲುಗಳನ್ನು ಕೈಬಿಟ್ಟಿತ್ತು. ಇದೀಗ ಆ ನಾಲ್ಕು ಸಾಲುಗಳನ್ನು ಸೇರಿಸಿರುವ ಕೇಂದ್ರ ಸರಕಾರ ಓಟ್ಟು ಆರು ಚರಣಗಳನ್ನು ಪಠಣ ಮಾಡುವುದನ್ನು ಕಡ್ಡಾಯಗೊಳಿಸಿದೆ.

