ಬೆಂಗಳೂರು: ಬಿಕ್ಲು ಶಿವ ಎಂಬ ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಜಾಮೀನು ಅರ್ಜಿ ವಜಾಗೊಂಡಿರುವ ಬೆನ್ನಲ್ಲೇ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.
ಈ ಕುರಿತು ಗೃಹಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿದ್ದು, ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿದ್ದು, ತಕ್ಷಣವೇ ಬೈರತಿ ಬಸವರಾಜ್ ಸೆರೆಂಡರ್ ಆದರೆ ಒಳ್ಳೆಯದು. ಇಲ್ಲವಾದಲ್ಲಿ ಪೊಲೀಸರು ತಮ್ಮ ಕೆಲಸ ತಾವು ಮಾಡ್ತಾರೆ ಎಂದಿದ್ದಾರೆ.
ಪ್ರಕರಣವನ್ನು ಕಾನೂನಿನ ಪ್ರಕಾರವೇ ನಾವು ತನಿಖೆ ನಡೆಸಿದ್ದೇವೆ. ಅವರಿಗೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅವರನ್ನು ಬಂಧಿಸಲಿದೆ. ಅದಕ್ಕಿಂತ ಮೊದಲೇ ಅವರು ಸೆರೆಂಡರ್ ಆದರೆ ಅವರಿಗೆ ಒಳ್ಳೆಯದು ಎಂದು ತಿಳಿಸಿದ್ದಾರೆ.

