ರಕ್ಷಣಾ ಉತ್ಪಾದನಾ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಚೆನ್ನೈನ ಅವಡಿಯಲ್ಲಿ ಇರುವ ಹೆವಿ ವೆಹಿಕಲ್ಸ್ ಫ್ಯಾಕ್ಟರಿ (HVF) ಉತ್ತಮ ಅವಕಾಶ ನೀಡಿದೆ.
ಸಂಸ್ಥೆ ಒಟ್ಟು 220 ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ತಾಂತ್ರಿಕ ಅನುಭವ ಹೊಂದಿರುವ 10ನೇ ತರಗತಿ ಉತ್ತೀರ್ಣ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಫೆಬ್ರವರಿ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ವಿಭಾಗವಾರು ಹುದ್ದೆಗಳ ವಿವರ ಈ ಕೆಳಗಿನಂತಿದೆ:
ಜೂನಿಯರ್ ಟೆಕ್ನಿಷಿಯನ್ (ಮೆಷಿನಿಸ್ಟ್) – 122 ಹುದ್ದೆಗಳು,
ಆಪರೇಟರ್ (ಮಟೀರಿಯಲ್ ಹ್ಯಾಂಡ್ಲಿಂಗ್ ಎಕ್ವಿಪ್ಮೆಂಟ್) – 55 ಹುದ್ದೆಗಳು,
ರಿಗ್ಗರ್ – 25 ಹುದ್ದೆಗಳು,
ಹೀಟ್ ಟ್ರೀಟ್ಮೆಂಟ್ ಆಪರೇಟರ್ – 8 ಹುದ್ದೆಗಳು,
ಸ್ಯಾಂಡ್ ಮತ್ತು ಶಾಟ್ ಬ್ಲಾಸ್ಟರ್ – 6 ಹುದ್ದೆಗಳು,
ಫಿಟ್ಟರ್ (ಆಟೋ ಎಲೆಕ್ಟ್ರಿಕ್) – 4 ಹುದ್ದೆಗಳು.
ಅಭ್ಯರ್ಥಿಗಳು ತಮ್ಮ ಅರ್ಹತೆ ಹಾಗೂ ಅನುಭವದ ಆಧಾರದಲ್ಲಿ ಸೂಕ್ತ ಹುದ್ದೆಯನ್ನು ಆಯ್ಕೆ ಮಾಡಬಹುದು.
ಅರ್ಜಿ ಸಲ್ಲಿಸಲು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ ಕೆಲಸದ ಅನುಭವ ಕಡ್ಡಾಯವಾಗಿದೆ. ಗರಿಷ್ಠ ವಯೋಮಿತಿ 35 ವರ್ಷಗಳು. ಸರಕಾರದ ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 300 ರೂ. ಅರ್ಜಿ ಶುಲ್ಕವಿದೆ. ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಟ್ರೇಡ್ ಟೆಸ್ಟ್ ಮತ್ತು ಅರ್ಹತೆಗಳ ಪರಿಶೀಲನೆಯ ಮೂಲಕ ನಡೆಯಲಿದೆ.
ಪೂರ್ಣಗೊಂಡ ಅರ್ಜಿಗಳನ್ನು ಈ ವಿಳಾಸಕ್ಕೆ ಕಳುಹಿಸಬೇಕು:
ಮುಖ್ಯ ಜನರಲ್ ಮ್ಯಾನೇಜರ್,
ಹೆವಿ ವೆಹಿಕಲ್ಸ್ ಫ್ಯಾಕ್ಟರಿ,
ಪೋಸ್ಟ್ ಬ್ಯಾಗ್ ನಂ. 01, HVF ಎಸ್ಟೇಟ್,
ಅವಡಿ, ಚೆನ್ನೈ – 600 054.
ರಕ್ಷಣಾ ಕ್ಷೇತ್ರದಲ್ಲಿ ತಾಂತ್ರಿಕ ಕೆಲಸ ಮಾಡಲು ಆಸಕ್ತಿ ಹೊಂದಿರುವವರು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದು ಒಳಿತು.

