ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಸಿಐಡಿ ಬಂಧನದಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಜಯದೇವ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಬೈರತಿ ಬಸವರಾಜ್ ಅವರಿಗೆ ಹೃದಯಸಂಬಂಧಿ ಸಮಸ್ಯೆಗಳಿದ್ದು, ಅವರಿಗೆ ವೈದ್ಯಕೀಯ ತಪಾಸಣೆ ನಡೆಸುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು, ಜಯದೇವ ಆಸ್ಪತ್ರೆಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
ಆಂಜಿಯೋಗ್ರಾಮ್ ಮಾಡಿಸಿದ್ದು, ಸಂಜೆಯ ವೇಳೆಗೆ ರಿಪೋರ್ಟ್ ಬರಲಿದ್ದು, ಉಳಿದೆಲ್ಲ ರಿಪೋರ್ಟ್ ನಾಳೆಯ ವೇಳೆಗೆ ಸಿಗಲಿದೆ. ಹೀಗಾಗಿ, ಒಟ್ಟಾರೆ, ಎಲ್ಲ ತಪಾಸಣಾ ವರದಿಯನ್ನು ಪಡೆದು ನಾಳೆ ಅಥವಾ ಸೋಮವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.

