ಉಪಯುಕ್ತ ಸುದ್ದಿ

ಶಕ್ತಿ ಯೋಜನೆ ನಿಲ್ಲಿಸಿ : ಸಿಎಂಗೆ ಖಾಸಗಿ ಬಸ್ ಮಾಲೀಕರ ಮನವಿ

Share It

ಬೆಂಗಳೂರು: ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ಮತ್ತು ಸಿಬ್ಬಂದಿಗೆ ತೊಂದರೆಯಾಗುತ್ತಿದ್ದು, ಜಿಲ್ಲಾ ವ್ಯಾಪ್ತಿಯೊಳಗೆ ಶಕ್ತಿ ಯೋಜನೆಯನ್ನು ನಿರ್ಬಂಧಿಸಿ ಎಂದು ಕರ್ನಾಟಕ ಸಾರಿಗೆ ಸಂಘಗಳ ಒಕ್ಕೂಟ ಸಿಎಂಗೆ ಮನವಿ ಮಾಡಿದೆ.

ವಿಧಾನಸೌಧದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಿಎಂಗೆ ಸಂಘಟನೆಗಳ ಮುಖಂಡರು ಇಂತಹದ್ದೊಂದು ಬೇಡಿಕೆಯನ್ನಿಟ್ಟಿದ್ದು, ಶಕ್ತಿ ಯೋಜನೆಯಿಂದ ಕೇವಲ ಮಾಲೀಕರ ಪರಿಸ್ಥಿತಿ ಮಾತ್ರವಲ್ಲ, ಬಸ್ಸುಗಳನ್ನು ಅವಲಂಬಿಸಿರುವ ಚಾಲಕ ವರ್ಗ, ಕಂಡಕ್ಟರ್ ಹಾಗೂ ಇನ್ನಿತರ ಅವಲಂಬಿತರ ಕುಟುಂಗಳಿಗೂ ತೊಂದರೆಯಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಶಕ್ತಿ ಯೋಜನೆಯಿಂದಾಗಿ ನಷ್ಟ ಅನುಭವಿಸುತ್ತಿರುವ ಎಷ್ಟೋ ಖಾಸಗಿ ಬಸ್‌ಗಳು ರಸ್ತೆಗಿಳಿಯುತ್ತಿಲ್ಲ. ಇದರಿಂದ ಮಾಲೀಕರು ಮತ್ತು ಸಿಬ್ಬಂದಿಗೆ ಮಾತ್ರವಲ್ಲದೇ ಸರಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಇದನ್ನೆಲ್ಲ ಪರಿಗಣಿಸಿ, ಜಿಲ್ಲಾ ವ್ಯಾಪ್ತಿಯೊಳಗೆ ಅನುಕೂಲವಾಗುವಂತೆ ನಿರ್ಬಂಧಿಸುವಂತೆ ಮನವಿ ಮಾಡಿಕೊಂಡಿದ್ದಾರೆ.


Share It

You cannot copy content of this page