ಬೆಂಗಳೂರು: ಸಿಎಂ ಬದಲಾವಣೆ ಚರ್ಚೆ ಪ್ರಶ್ನೆಯ ನಡುವೆ ಬೀದಿ ನಾಯಿಗಳನ್ನು ಹಿಡಿದು ಹಾಕುವ ಹೇಳಿಕೆ ನೀಡಿದ ಸಚಿವ ಎಚ್.ಸಿ.ಮಹದೇವಪ್ಪ ಅವರ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.
ಸಿಎಂ ಬದಲಾವಣೆ ಚರ್ಚೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಹೈಕೋರ್ಟ್ ಬೀದಿನಾಯಿಗಳನ್ನು ಹೊಡಿದು ಒಳಗೆಹಾಕಲು ಸೂಚನೆ ನೀಡಿದೆ. ರಾಜಕೀಯ ನಾಯಕತ್ವ ಗಟ್ಟಿಯಾಗಿಯೇ ಇದೆ. ನಾಯಕತ್ವ ಚರ್ಚೆ ಎಲ್ಲಿ ನಡೀತಿದೆ ಎಂದು ಪ್ರಶ್ನಿಸಿದ್ದರು.
ನಾನು ಶಾಸಕರನ್ನು ಬೀದಿ ನಾಯಿಗಳು ಎಂದಿಲ್ಲ, ಹೈಕೋರ್ಟ್ ಹೇಳಿದ್ದನ್ನು ಉಲ್ಲೇಖಿಸಿದೆ. ನಾಯಕತ್ವ ಬದಲಾವಣೆ ಚರ್ಚೆಗೂ ಬೀದಿನಾಯಿಗಳ ಹೇಳಿಕೆಗೂ ಸಂಬಂಧವಿಲ್ಲ. ಇವರೆಡನ್ನು ಮಿಕ್ಸ್ ಮಾಡಿ ವಿವಾದ ಯಾಕೆ ಮಾಡ್ತೀರಿ ಎಂದು ಮಹದೇವಪ್ಪ ತಿಳಿಸಿದ್ದು, ಹೈಕಮಾಂಡ್‌ಗೆ ಡೈರೆಕ್ಷನ್ ಕೊಡೋಕೆ ಆಗುತ್ತಾ? ಬಾಲವೇ ನಾಯಿಯನ್ನು ಅಲ್ಲಾಡಿಸಲು ಸಾಧ್ಯವಾ ಎಂದು ಪ್ರಶ್ನಿಸಿದರು.
ಈ ನಡುವೆ ಗಂಗಾ ಬಸವರಾಜ್ ಅವರು, ಮಹದೇವಪ್ಪ ಅವರು ಹಿರಿಯ ಸಚಿವರು, ಅವರು ಶಾಸಕರನ್ನು ನಾಯಿಗೆ ಹೋಲಿಕೆ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದು, ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿದೆ, ಇದರಲ್ಲಿ ಮುಚ್ಚುಮರೆ ಏನಿಲ್ಲ ಎಂದು ತಿಳಿಸಿದ್ದಾರೆ.

