ರಾಜಕೀಯ ಸುದ್ದಿ

ಕಟ್ಟಾ ಕಾಂಗ್ರೆಸ್ಸಿಗರು ಬೀದಿ ನಾಯಿಗಳಲ್ಲ, ನಿಯತ್ತಿನ ನಾಯಿಗಳು: ಡಿ.ಕೆ.ಸುರೇಶ್ ಕಿಡಿ

Share It

ಬೆಂಗಳೂರು: ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸುವ ವೇಳೆ ಬೀದಿ ನಾಯಿಗಳು ಪದ ಬಳಕೆ ಮಾಡಿದ ಸಚಿವ ಮಹದೇವಪ್ಪ ಅವರಿಗೆ ಡಿ.ಕೆ.ಸುರೇಶ್ ಕೌಂಟರ್ ಕೊಟ್ಟಿದ್ದು, ಕಟ್ಟಾ ಕಾಂಗ್ರೆಸ್ಸಿಗರು ಬೀದಿನಾಯಿಗಳಲ್ಲ, ನಿಯತ್ತಿನ ನಾಯಿಗಳು ಎಂದಿದ್ದಾರೆ.

ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು, ಅವರು ಎಂದಿಗೂ ಮಾಲೀಕನ ಋಣ ತೀರಿಸುತ್ತಾರೆ. ಯಾವುದೇ ಕಾರಣಕ್ಕೂ ನಿಯತ್ತಿನ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದು ಕುಟುಕಿದ್ದಾರೆ.

ಕೆ.ಎನ್.ರಾಜಣ್ಣ ಮಾತನಾಡಿ, ಮಹದೇವಪ್ಪ ಆಡಿರೋದು ಗಾದೆ ಮಾತು ಅದನ್ನೇ ಯಾಕೆ ಅಷ್ಟೊಂದು ದೊಡ್ಡದು ಮಾಡ್ತೀರಾ ಎಂದು ಸಮಜಾಯಿಷಿ ನೀಡಿದ್ದಾರೆ.


Share It

You cannot copy content of this page