ಅಪರಾಧ ಸುದ್ದಿ

ಯಮವೇಗದಲ್ಲಿ ಬಂದ ಬೈಕ್ ಡಿಕ್ಕಿ: ಬ್ಯಾಂಕ್ ಉದ್ಯೋಗಿ ಸಾವು

Share It

ಬೆಂಗಳೂರು: ಯಮವೇಗದಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಬ್ಯಾಂಕ್ ನಿಂದ ಮಧ್ಯಾಹ್ನ ಊಟ ತರಲೆಂದು ಎಚ್.ಡಿ.ಎಫ್.ಸಿ ಬ್ಯಾಂಕ್ ಉದ್ಯೋಗಿಯಾದ ಯೋಗೇಶ್ವರಿ ಹೊರಗೆ ಬಂದಿದ್ದರು. ಈ ವೇಳೆ ವೇಗವಾಗಿ ಬಂದ ಬೈಕ್ ಅವರಿಗೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮರಣವೊಂದಿದ್ದಾರೆ. ಯೋಗೇಶ್ವರಿ ಅವರು ಬ್ಯಾಂಕ್ ಉದ್ಯೋಗಕ್ಕೆ ತಮ್ಮ ಸ್ವಗ್ರಾಮವನ್ನು ಬಿಟ್ಟು ಬಂದು ಪಿಜೆಯಲ್ಲಿ ನೆಲಡೆಸಿದ್ದರು ಎನ್ನಲಾಗಿದೆ.

ರಾಜಾಜಿನಗರದ ಎಚ್‌ಡಿಎಫ್‌ಸಿ ಹೋಮ್ ಲೋನ್ ಕಚೇರಿ ಸೋಮವಾರ ಮಧ್ಯಾಹ್ನ 2.45ರ ಸುಮಾರಿನಲ್ಲಿ ಘಟನೆ ನಡೆದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೈಕ್ ಸವಾರನ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಯೋಗೇಶ್ವರಿ ಕುಟುಂಬಸ್ಥರ ಆಕ್ರಂಧನ ಮುಗಿಲುಮುಟ್ಟಿದೆ.


Share It

You cannot copy content of this page