ಅಪರಾಧ ಸುದ್ದಿ

ದಾವಣಗೆರೆ: ಟಿಟಿ ಗಾಡಿ ಮಗುಚಿಬಿದ್ದು 13 ಜನರಿಗೆ ಗಾಯ

Share It

ದಾವಣಗೆರೆ: ಬೆಂಗಳೂರಿನಿAದ ದಾಂಡೇಲಿಗೆ ಹೊರಟಿದ್ದ ಟಿಟಿ ವಾಹನವೊಂದು ಮಗುಚಿಬಿದ್ದಿದ್ದು, ಅದರಲ್ಲಿದ್ದ ೧೩ ಜನರು ಗಾಯಗೊಂಡಿರುವ ಘಟನೆ ದಾವಣಗೆರೆ ಸಮೀಪ ನಡೆದಿದೆ.

ದಾವಣಗೆರೆ ಜಿಲ್ಲೆಯ ಹೆಬ್ಬಾಳ ಟೋಲ್ ಬಳಿ, ವಾಹನ ಮಗುಚಿಬಿದ್ದಿದ್ದು, ೧೩ ಜನರು ಗಾಡಿಯೊಳಗೆ ಸಿಲುಕಿದ್ದರು. ತಕ್ಷಣವೇ ಇನ್ನಿತರ ವಾಹನಗಳಿಂದ ಇಳಿದ ಪ್ರಯಾಣಿಕರು ಅವರೆನ್ನೆಲ್ಲ ರಕ್ಷಣೆ ಮಾಡಿದ್ದು, ಅವರ ಪೈಕಿ ೧೩ ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನೆಲ್ಲ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ನಡುವೆ ಚಾಲಕ ಗಾಡಿಯ ಅಡಿಯಲ್ಲಿ ಸಿಲುಕಿಕೊಂಡಿದ್ದು, ಆತನ ರಕ್ಷಣೆಗೆ ಹರಸಾಹಸ ಪಡಲಾಯಿತು. ಅನಂತರ ಟಿಟಿ ಗಾಡಿಯ ಬಿಡಿಭಾಗವನ್ನು ಕತ್ತರಿಸಿ ಆತನನ್ನು ರಕ್ಷಣೆ ಮಾಡಲಾಯಿತು. ಆತನಿಗೆ ಗಂಭೀರವಾದ ಗಾಯಗಳಾಗಿದ್ದು, ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಆತನನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.

ಬೆಂಗಳೂರಿನಿAದ ಟಿಟಿ ಗಾಡಿಕೊಂಡು ಪ್ರವಾಸಕ್ಕೆಂದು ತಂಡವೊAದು ದಾಂಡೇಲಿಗೆ ಹೊರಟಿತ್ತು. ಈ ವೇಳೆ ಘಟನೆ ನಡೆದಿದೆ ಎನ್ನಲಾಗಿದ್ದು, ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.


Share It

You cannot copy content of this page