ಫ್ಯಾಷನ್ ಸುದ್ದಿ

ಸ್ಪೆಕ್ಸ್ ಬಂಕರ್‌ನ 5 ನೇ ಝೆಸ್ ವಿಷನ್ ಸೆಂಟರ್ ಬೆಂಗಳೂರಿನಲ್ಲಿ ಆರಂಭ

Share It

ಬೆಂಗಳೂರು: ಸ್ಪೆಕ್ಸ್ ಬಂಕರ್‌ ತನ್ನ ಐದನೇ ಝೆಸ್ ವಿಷನ್ ಸೆಂಟರ್ ಅನ್ನು ಕೋರಮಂಗಲದ ನೆಕ್ಸಸ್ ಮಾಲ್ ನಲ್ಲಿ ಆರಂಭಿಸಿದೆ.

ಇತ್ತೀಚೆಗೆ ಶಾಖೆಯ ಉದ್ಘಾಟನೆ ನಡೆದಿದ್ದು, ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಮೋಹಿತ್ ಅಗರ್ವಾಲ್ ಮಾತನಾಡಿ, ಇಂದಿರಾನಗರದಲ್ಲಿ ನಮ್ಮ ಮೊದಲ ಶಾಖೆಯನ್ನು 2022 ರಲ್ಲಿ ಆರಂಭಿಸಿದಾಗ ನಾವು ಜಾಗತಿಕವಾಗಿ ದೃಷ್ಟಿ ಆರೈಕೆ ಪರಿಹಾರಗಳನ್ನು ಒದಗಿಸುವ ಭಾರತದ ಅತ್ಯಂತ ದೊಡ್ಡ ಸೆಂಟರ್ ಆಗಿ ಬೆಳೆಯುವ ಬಗ್ಗೆ ಯೋಚಿಸಿಯೇ ಇರಲಿಲ್ಲ ಎಂದರು.

ಇದೀಗ ನಾವು ಪ್ರಮುಖ ಐದು ಸ್ಥಳಗಳಲ್ಲಿ ನಮ್ಮ ಸೆಂಟರ್ ಆರಂಭಿಸಿದ್ದು, ಅಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಎಐ ಬಳಸಿ ಫ್ಯಾಷನ್ ಮತ್ತು ದೃಷ್ಟಿ ಪರಿಹಾರಗಳನ್ನು ಒದಗಿಸುತ್ತಿದ್ದೇವೆ. ನಿಖರ ದೃಷ್ಟಿ ಆರೈಕೆ ಕ್ರಾಂತಿ ತರಲು ಹೊರಟಿರುವ ನಾವು ಅತ್ಯಾಧುನಿಕ ಡಯಗ್ನೋಸ್ಟಿಕ್ ಮತ್ತು ವೈಯಕ್ತಿಯ ಐವೇರ್ ಆಯ್ಕೆಗಳೊಂದಿಗೆ ದೇಶಾದ್ಯಂತ ಮಾನದಂಡಗಳನ್ನು ಸ್ಥಾಪಿಸಲು ಮುಂದಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಝೆಸ್ ಸೆಂಟರ್, ಕೋರಮಂಗಲದ ನೆಕ್ಸಸ್ ಮಾಲ್‌ನ ಮೊದಲ ಮಹಡಿಯಲ್ಲಿ ಆರಂಭವಾಗಿದ್ದು, ೧೨೦೦ ಚದರ ಅಡಿ ವಿಸ್ತೀರ್ಣದಲ್ಲಿ ವಿನ್ಯಾಸಗೊಂಡಿದೆ. ಅತ್ಯಾಧುನಿಕ ಐವೇರ್ ರಿಟೇಲ್ ಮತ್ತು ಕಣ್ಣಿನ ಆರೈಕೆ ಅನುಭವವನ್ನು ಒದಗಿಸಲಿದೆ. ಪ್ರೀಮಿಯಂ ಫ್ರೇಮ್‌ಗಳ ಆಯ್ಕೆಯ ಜತೆಗೆ ಅತ್ಯಾಧುನಿಕ ದೃಷ್ಟಿ ತಂತ್ರಜ್ಞಾನಗಳನ್ನು ಇದು ಒಳಗೊಂಡಿದೆ.


Share It

You cannot copy content of this page